ಪುಷ್ಪಾವತಿ ಪೂಜಾರಿಮನೆ ನಿಧನ

0

ಯೇನೆಕಲ್ಲು ಗ್ರಾಮದ ಪೂಜಾರಿಮನೆ ದಿ. ಪದ್ಮಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ಪುಷ್ಪಾವತಿ ಪೂಜಾರಿಮನೆ ಅಸೌಖ್ಯದಿಂದ ಅ. 19ರಂದು ನಿಧನರಾದರು. ಇವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ, 4 ಮಂದಿ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.