ಗೋ ಹತ್ಯೆ ಕಾಯ್ದೆಯಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಆರೋಪಿಗೆ ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ವೇಳೆ ಪೊಲೀಸರಿಂದ ಕಾಲಿಗೆ ಗುಂಡು

0

ಕಳೆದ ಕೆಲವು ತಿಂಗಳ ಹಿಂದೆ ಗೋ ಹತ್ಯೆ ಕಾಯ್ದೆಯಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಕಾಸರಗೋಡು ಮೂಲದ ಆರೋಪಿಗೆ ಮತ್ತೊಮ್ಮೆ ಅಕ್ರಮ ಗೋಸಾಗಾಟದ ಆರೋಪದಡಿ ಪುತ್ತೂರು ಗ್ರಾಮೀಣ ಠಾಣೆಯ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಕೇರಳದ ಕಾಸರಗೋಡು ನಿವಾಸಿ ಅಬ್ದುಲ್ಲಾ (46 ವರ್ಷ ) ಎಂಬತ ಇಂದು ಮುಂಜಾನೆ ಈಶ್ವರಮಂಗಲದ ಬಳಿ ಈಚರ್ ವಾಹನದಲ್ಲಿ 10 ಜಾನುವಾರುಗಳನ್ನು ಸಾಗಿಸುತ್ತಿದ್ದು ಪೊಲೀಸರು ಸೂಚಿಸಿದಾಗ ಆತನು ವಾಹನ ನಿಲ್ಲಿಸದೆ ಇದ್ದು ಪೊಲೀಸರು ಸುಮಾರು 10 ಕಿಲೋಮಿಟರ್ ದೂರದವರೆಗೆ ಈತನನ್ನು ಬೆನ್ನಟ್ಟಿದ್ದಾರೆ. ಅಲ್ಲದೆ ಈತ ಪೊಲೀಸರ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ. ಈ ಸಂದರ್ಭದಲ್ಲಿ ಪಿಎಸ್ಐ ರವರು ಎರಡು ಸುತ್ತು ಗುಂಡುಗಳನ್ನು ಫೈರ್ ಮಾಡಿದ್ದು ಒಂದನ್ನು ಈಚರ್ ವಾಹನದ ಮೇಲೆ ಮತ್ತೊಂದನ್ನು ಆರೋಪಿಯ ಕಾಲಿಗೆ ಬಿದ್ದಿರುತ್ತದೆ.
ಘಟನೆಯ ಸಂದರ್ಭದಲ್ಲಿ ಈಚರ್ ವಾಹನದಲ್ಲಿದ್ದ ಮತ್ತೋರ್ವ ಆರೋಪಿ ತಪ್ಪಿಸಿಕೊಂಡಿದ್ದು ಕಾಲಿಗೆ ಗುಂಡು ತಗುಲಿ ಗಾಯಗೊಂಡ ಆರೋಪಿ ಅಬ್ದುಲ್ಲನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಂಪ್ಯ ಪೊಲೀಸ್ ಠಾಣೆ ಎಸ್ ಐ ಜಂಬೂ ರಾಜ್ ಮಹಾಜನ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.