















ಪ್ರತಿ ವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ದೀಪಾವಳಿ ಆಚರಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಈ ವರ್ಷ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಇಂಟರ್ಯಾಕ್ಟ್ ಕ್ಲಬ್ ಜ್ಞಾನದೀಪ ಬೆಳ್ಳಾರೆಯ ಸಹಯೋಗದಲ್ಲಿ ಕಡಬ ಸಮೀಪದ ನೂಜಿಬಾಳ್ತಿಲ ಮರಿಯಾಳಮ್ ಸೇವಾಶ್ರಮದಲ್ಲಿರುವ ನಿರ್ಗತಿಕ ಮತ್ತು ಅನಾಥರ ಆಶ್ರಮಮ ವಾಸಿಗಳೊಂದಿಗೆ ಆಚರಿಸಲಾಯಿತು.

ಆಶ್ರಮದ ಮುಖ್ಯ ಮೇಲ್ವಿಚಾರಕಿ ಸಿಸ್ಟರ್ ವೀಣಾ ದೀಪ ಬೆಳಗಿಸಿ ಶುಭಹಾರೈಸಿದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ವಿಶ್ವನಾಥ ಕೆ ಅಧ್ಯಕ್ಷತೆ ವಹಿಸಿದ್ದರು.ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಗನ್ ಎಂ ಎಸ್, ಮೇಲ್ವಿಚಾರಕಿ ಸಿಸ್ಟರ್ ಪ್ರೇಮಲತಾ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಧ್ಯಕ್ಷ ಚಂದ್ರಶೇಖರ ರೈ ಬಜನಿ, ಆಶ್ರಮದ ಅಡುಗೆ ಸಹಾಯಕಿ ಸ್ನೇಹಾ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು ಹೂವಿನ ಆಕರ್ಷಕ ರಂಗೋಲಿ ರಚಿಸಿ ದೀಪಗಳನ್ನು ಹಚ್ಚಿದರು. ವಿದ್ಯಾರ್ಥಿಗಳು ಆಶ್ರಮವಾಸಿಗಳೊಂದಿಗೆ ಸಹಭೋಜನ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಕಾರ್ಯಕ್ರಮ ನಿರ್ವಹಿಸಿದರು.










