ಬೆಳ್ಳಾರೆ : ಕಣ್ಣಿನ ಚಿಕಿತ್ಸಾ ವೆಚ್ಚಕ್ಕಾಗಿ ರೂ. 50,000.00 ನೀಡಿ ವಿದ್ಯಾರ್ಥಿಗೆ ನೆರವಾದ ಪ್ರೆಂಡ್ಸ್ ಬೆಳ್ಳಾರೆ

0

ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಕಮರಿದ ಕನಸು ಮಿಡಿಯುವ ಮನಸ್ಸು ಎಂಬ ಧ್ಯೇಯದೊಂದಿಗೆ ಕಷ್ಟದ ಕುಟುಂಬಕ್ಕೆ ಸಣ್ಣ ಹಣದ ಸಹಾಯವಾಗಬೇಕು ಎನ್ನುವ ದೃಷ್ಟಿಯಿಂದ ನವರಾತ್ರಿಯ ಒಂದು ದಿನ ವಿವಿಧ ವೇಷ ಧರಿಸಿ ಧನ ಸಂಗ್ರಹಿಸಿ, ಸಂಗ್ರಹವಾದ ಒಟ್ಟು ಮೊತ್ತವನ್ನು ಫ್ರೆಂಡ್ಸ್ ಬೆಳ್ಳಾರೆ ಅಶಕ್ತ ಕುಟುಂಬಕ್ಕೆ ನೀಡುತ್ತಾ ಬಂದಿರುತ್ತದೆ.

ಈ ವರ್ಷ ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ವಾಸ್ತವ್ಯವಿರುವ ಕುಟುಂಬ, ಇಬ್ಬರು ಹೆಣ್ಣು ಮಕ್ಕಳಲ್ಲಿ ಕು.ಶೈಲಿ ಇವಳಿಗೆ ಬಾಲ್ಯದಿಂದಲೆ ಆವರಿಸಿದ ದೃಷ್ಟಿ ಸಂಬಂದಿತ ತೊಂದರೆಯಿಂದ ಒಂದು ಕಣ್ಣಿನ ಧೃಷ್ಟಿ ಯನ್ನು ಸಂಪೂರ್ಣ ಕಳೆದುಕೊಂಡು ಒಂದು ಕಣ್ಣಿನಲ್ಲಿ ಸೀಮಿತ % ದೃಷ್ಟಿ ಹೊಂದಿ ತನ್ನ ಅಕ್ಕನ ಸಹಾಯದಿಂದ ಬೆಳ್ಳಾರೆ ಕೆ ಪಿ ಎಸ್ ನ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,
ಇದುವರೆಗೆ ಹಲವು ಬಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗಾಗಿ ಹಲವು ಹಣವನ್ನು ವ್ಯಯಿಸಿ ಪ್ರಸ್ತುತ ಎಲ್ಲವನ್ನೂ ಕೈ ಚೆಲ್ಲಿ ಕೂತಿರುವ ವಿದ್ಯಾರ್ಥಿಯ ಮುಂದಿನ ಚಿಕಿತ್ಸೆ ವೆಚ್ಚಾಕ್ಕಾಗಿ ವಿವಿಧ ವೇಷ ಧರಿಸಿ ಸಂಗ್ರಹವಾದ ಒಟ್ಟು ರೂ. 50,000.00 ವನ್ನು ಮತ್ತು ವೈದ್ಯರ ಸಲಹೆ ಮೇರೆಗೆ ತಾತ್ಕಾಲಿಕವಾಗಿ ಮುಂದಿನ ಶಾಶ್ವತ ಚಿಕಿತ್ಸೆ ವರೆಗೆ ಕನ್ನಡಕ ಮಾಡಿಸಿ, ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಈಗಾಗಲೇ ಪ್ರಸಾದ್ ನೇತ್ರಾಲಯ ಮಂಗಳೂರು ಇಲ್ಲಿನ ವೈದ್ಯರೊಂದಿಗೆ ಸಂಪರ್ಕಿಸಿ ವಿದ್ಯಾರ್ಥಿಯ ಕಣ್ಣಿನ ಪರೀಕ್ಷೆ ನಡೆಸಿ ನೀಡಿದ ವರದಿಯಂತೆ,ಶಂಕರ ನೇತ್ರಾಲಯ ಬೆಂಗಳೂರು ಇಲ್ಲಿನ ವೈದ್ಯರನ್ನು ಭೇಟಿಯಾಗಿ ಅವರ ಅಭಿಪ್ರಾಯದಂತೆ ಚಿಕಿತ್ಸೆ ಪಡೆಯಲು ಸೂಚಿಸಿರುತ್ತಾರೆ, ಆದರೆ ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಜನಪ್ರತಿನಿಧಿಗಳ ಮುಖೇನ ಅಥವ ದಾನಿಗಳ ಮುಖಾಂತರ ಸಹಾಯ ಮಾಡಿ ಪುಟ್ಟ ಹೆಣ್ಣು ಮಗುವಿನ ದೃಷ್ಟಿ ತೊಂದರೆಗೆ ಶಾಶ್ವತ ಪರಿಹಾರ ಆಗುವಂತೆ ಸಹಾಯ ಮಾಡಬೇಕಾಗಿ ಮೂಲಕ ವಿನಂತಿ.