ಬೊಮ್ಮರು ಗಜಾನನ ಯುವತಿ ಮಂಡಲದ ವತಿಯಿಂದ ಸ್ವಚ್ಛತೆ















ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪಂಚಸಪ್ತತಿ 2025 ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶ್ರೀ ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಸದಸ್ಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮರ್ಕಂಜದ ವಠಾರದಲ್ಲಿ ಅ. 24ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಗಜಾನನ ಯುವತಿ ಮಂಡಲರವರಿಂದ ರೂಪುಗೊಂಡಿರುವ ಮಹಿಳಾ ಸಿಂಗಾರಿ ಮೇಳದ ರಂಗಪ್ರವೇಶ ಕಾರ್ಯಕ್ರಮಕ್ಕೆ ಶಾಲಾವತಿಯಿಂದ ನೀಡಿದ ವಿಶೇಷ ಸಹಕಾರಕ್ಕಾಗಿ ಶಾಲೆಗೆ ಗೌರವ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು, ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಮತ್ತು ಶ್ರೀ ಗಜಾನನ ಯುವತಿ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದು ಸಹಕರಿಸಿದರು.











