
ಯುವಜನ ಸಂಯುಕ್ತ ಮಂಡಳಿಯ ಪಂಚ ಸಪ್ತತಿ ಕಾರ್ಯಕ್ರಮದಂತೆ
ಕಳಂಜ ಯುವಕ ಮಂಡಲ ವತಿಯಿಂದ ರಸ್ತೆ, ಬಸ್ ತಂಗುದಾಣ ಸ್ವಚ್ಚತಾ ಕಾರ್ಯ ಅ.26 ರಂದು ನಡೆಸಲಾಯಿತು.









ಕಳಂಜ ಗ್ರಾಮದ ಕಜೆಮೂಲೆ ಯಿಂದ ಕೋಟೆಮುಂಡುಗಾರು ವರೆಗಿನ ರಸ್ತೆ ಬದಿಯ ಅಗತ್ಯ ಪೊದೆಗಳನ್ನು ತೆಗೆಯಲಾಯಿತು. ಕಜೆಮೂಲೆ, ಶೇಡಿಕಜೆ, ಕೋಟೆಮುಂಡುಗಾರು ಬಸ್ ತಂಗುದಾಣಗಳನ್ನು ಸ್ವಚ್ಚಗೊಳಿಸಲಾಯಿತು.
ಶ್ರಮ ಸೇವೆಯಲ್ಲಿ ಗಂಗಾಧರ ತೋಟದಮೂಲೆ, ರಾಮಯ್ಯ ರೈ ಕಜೆಮೂಲೆ, ನಾರಾಯಣ ಶೇಡಿಕಜೆ, ವಾಸುದೇವ ಭೋರ್ಕರ್ ಮುಂಡುಗಾರು, ಸತೀಶ್ ಬಿ, ರಘುರಾಮ ಕೋಟೆಬನ, ಜಗದೀಶ್ ಮುಂಡುಗಾರು, ಯಶವಂತ ತಂಟೆಪ್ಪಾಡಿ, ಚಂದ್ರಶೇಖರ ಕೋಟೆ, ನಾರಾಯಣ ಕೋಡಿಯಡ್ಕ, ಸುನಿಲ್ ಪಟ್ಟೆ, ಶ್ರವಣ್ ಶೇಡಿಕಜೆ, ಮತ್ತಿತರರು ಪಾಲ್ಗೊಂಡರು.










