ಡಾ.ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬೆಳ್ಳಿರಥ ಸಮರ್ಪಣೆ

0

ಬೆಳ್ಳಿರಥದ ಸ್ವಾಗತಕ್ಕೆ ವಳಲಂಬೆಯಲ್ಲಿ ಪೂರ್ವಭಾವಿ ಸಭೆ

ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ವಳಲಂಬೆಯಲ್ಲಿ ಅ.28 ರಂದು ಪೂರ್ವಭಾವಿ ಸಭೆ ನಡೆಯಿತು. ಸಭೆಯು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿದ್ದು ಸಭೆಯಲ್ಲಿ ಡಾ.ಜ್ಯೋತಿ ಆರ್ ಪ್ರಸಾದ್, ಮೋಹನ್ ರಾಮ್ ಸುಳ್ಳಿ, ದಿನೇಶ್ ಮಡಪ್ಪಾಡಿ , ಪಿ.ಎಸ್ ಗಂಗಾಧರ, ಭವಾನಿಶಂಕರ ಅಡ್ತಲೆ, ಯಶೋದಾ ರಾಮಚಂದ್ರ, ವೆಂಕಟ್ ದಂಬೆಕೋಡಿ, ಕೇಶವ ಹೊಸೋಳಿಕೆ, ಬಾಬು ಗೌಡ ಅಚ್ರಪ್ಪಾಡಿ, ತೀರ್ಥರಾಮ ಹೊಸೋಳಿಕೆ, ಯೋಗೀಶ್ ಹೊಸೋಳಿಕೆ, ಅನಂತರಾಮ ಮಣಿಯಾನ ಮನೆ, ಜಗದೀಶ್ ಪೈಕ, ಗೋಪಾಲಕೃಷ್ಣ ಪುರ್ಲುಮಕ್ಕಿ, ರವಿ ವಳಲಂಬೆ, ದೊಡ್ಡಣ್ಣ ಬರೆಮೇಲು, ವಿಜಯಕುಮಾರ್ ಎಂ.ಬಿ, ದೀವಿಪ್ರಸಾದ್ ಕುದ್ಪಾಜೆ ಮತ್ತಿತರರು ಉಪಸ್ಥಿತರಿದ್ದರು.