ಬಸ್ಸಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡ ಮಹಿಳೆ – ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತ್ಯು

0

ಸಂಪಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಮಹಿಳೆಯೋರ್ವರು ಬಸ್ಸಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡು ನಂತರ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮೃತಪಟ್ಟ ಘಟನೆ ಅ.29 ರಂದು ನಡೆದಿದೆ.
ಸಂಪಾಜೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಬಸ್ಸು ದೊಡ್ಡಡ್ಕ ಬಳಿ ಬರುತ್ತಿರುವಾಗ ಸಂಪಾಜೆ ಬೈಲು ಕಮಲ ಎಂಬವರು ಕುಸಿದು ಬಿದ್ದಿದ್ದು ಅವರನ್ನು ತಾಜ್ ಟರ್ಲಿ ಯವರು ಕೂಡಲೇ ಆಂಬ್ಯುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದರು.
ಆಸ್ಪತ್ರೆಯಲ್ಲಿ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇವರು ಸಂಜೆ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.


ಇವರು ಸಂಪಾಜೆ ಗ್ರಾಮದ ಬೆಳ್ಳಿಪ್ಪಾಡಿ ಹೂವಯ್ಯರವರ ಪತ್ನಿಯಾಗಿದ್ದು ಇವರಿಗೆ 70 ವರ್ಷ ಪ್ರಾಯವಾಗಿತ್ತು.

ಮೃತರು ಮಕ್ಕಳಾದ ಜಯಶ್ರೀ , ಶೋಭಾ , ಹೇಮಂತ್ ಅವರನ್ನು ಅಗಲಿದ್ದಾರೆ.