ಎಣ್ಮೂರು ಮಖಾಂ ಉರೂಸ್ ಪ್ರಯುಕ್ತ ಉರೂಸ್ ಸಮಿತಿ ರಚನೆ

0

ಚರಿತ್ರೆ ಪ್ರಸಿದ್ದವಾದ ಎಣ್ಮೂರು ಐವತ್ತೊಕ್ಲು ಮಖಾಂ ಉರೂಸ್ ಕಾರ್ಯಕ್ರವು 2026, ಜನವರಿ ತಿಂಗಳ 15, 16, 17ನೇ ದಿನಾಂಕದಂದು ನಡೆಯಲಿರುವುದು.

ಎಣ್ಮೂರು, ಕಜೆ-ನಿಂತಿಕ್ಕಲ್, ಕರಿಂಬಿಲ, ಅಲೆಕ್ಕಾಡಿ, ಇಂದ್ರಾಜೆ, ‌ನೆಕ್ಕಿಲ ಜಮಾಅತ್’ಗಳ ಜಂಟಿ ಆಶ್ರಯದಲ್ಲಿ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಇತ್ತೀಚೆಗೆ ಎಣ್ಮೂರು ಜುಮ್ಮಾ ಮಸೀದಿಯಲ್ಲಿ ಸೇರಲಾದ ವಿಶೇಷ ಸಭೆಯಲ್ಲಿ ಉರೂಸ್ ಸಮಿತಿಯನ್ನು ರಚಿಸಲಾಯಿತು.

ಉರೂಸ್ ಸಮಿಯ ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಕಲ್ಮಡ್ಕ, ಉಪಾಧ್ಯಕ್ಷರಾಗಿ ಟಿ.ಎಸ್. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಕೊಳತಂಕರೆ, ಜತೆ ಕಾರ್ಯದರ್ಶಿಯಾಗಿ ಹನೀಫ್ ಹಾಜಿ ಇಂದ್ರಾಜೆ, ಶಿಹಾಬುದ್ದೀನ್ ಕರಿಂಬಿಲ, ಕೋಶಾಧಿಕಾರಿಯಾಗಿ ಟಿ. ಎಸ್. ಸುಲೈಮಾನ್ ಆಯ್ಕೆಯಾದರು.

ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.