
ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬೆಳ್ಳಾರೆ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ನ. 01 ರಂದು ಜರುಗಿತು. ಕಾರ್ಯಕ್ರಮದಲ್ಲಿ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ವಸಂತ ಗೌಡ ಪಡ್ಪು ಅಧ್ಯಕ್ಷತೆ ವಹಿಸಿದ್ದರು.
















ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗ ಸಹ ಶಿಕ್ಷಕ ದಿನೇಶ್ ಮಚಾರ್ ಪ್ರಧಾನ ಉಪನ್ಯಾಸ ನೀಡಿದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷ ಚಂದ್ರಶೇಖರ ರೈ ಬಜನಿ , ನಿವೃತ್ತ ಮುಖ್ಯ ಶಿಕ್ಷಕಿ ಸುಭದ್ರ ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಗಣೇಶ್ ಪಾಟಾಳಿ ಕುರುoಬುಡೆಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಗೌಡ ಪಡ್ಪು ಸ್ವಾಗತಿಸಿ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಉಪಾಧ್ಯಕ್ಷ ಶ್ರೀನಿವಾಸ್ ಕುರುoಬುಡೆಲು ವಂದಿಸಿದರು ಸಂಜಯ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.











