
ಶ್ರೀಕೃಷ್ಣ ಭಜನಾ ಮಂಡಳಿ ಶೇಣಿ ಇದರ ವಾರ್ಷಿಕೋತ್ಸವ ಮತ್ತು ಭಜನಾ ತರಬೇತುದಾರರಿಗೆ ಸನ್ಮಾನ ಕಾರ್ಯಕ್ರಮ ನ. 2ರಂದು ಶೇಣಿಯಲ್ಲಿ ನಡೆಯಿತು.
ಎಂ.ಎಸ್.ಕೆ ಗೆಳೆಯರ ಬಳಗ ಶೇಣಿ ಇದರ ಆಶ್ರಯದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಸ್.ಕೆ ಗೆಳೆಯರ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ಸೂರೆಂಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುದ್ದಿ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಮತ್ತು ಶೇಣಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ಪಾಡಾಜೆ ಭಜನಾ ತರಬೇತುದಾರರಾದ ಸಂತೋಷ್ ಕುಳ್ಳಾಜೆಯವರನ್ನು ಸನ್ಮಾನಿಸಿದರು.















ಎಂ.ಎಸ್.ಕೆ. ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಮೋಟುಕಾನ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಭಜನಾರ್ಥಿ ಬೇಬಿ ನಿಶಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಗೆಳೆಯರ ಬಳಗದ ಸದಸ್ಯರು, ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











