ಕೆರ್ನಾಟಕ ಸರ್ಕಾರದ ಸ್ಪಿಕರ್ ಯು ಟಿ ಖಾದರ್ ರವರ ವಿರುದ್ಧ ಮಾಜಿ ಸ್ಪಿಕರ್ ಆಗಿರುವ ಕಾಗೇರಿಯವರು ಮಾಡಿರುವ ಅರೋಕ್ಕೆ ಯಾವುದೇ ಆಧಾರವಿಲ್ಲ ಅದು ದುರುದ್ದೇಶ ಪೂರಿತವಾದದ್ದು ಈ ಹಿಂದೆ ಸ್ಪಿಕರ್ ಆಗಿದ್ದ ಕಾಗೇರಿಯವರ ಅವದಿಯಲ್ಲಿ ಸ್ಯಾನಿಟೈಸರ್ ಖರೀದಿಯ ಬಗ್ಗೆ ಹಾಗೂ ಬೋಪಯ್ಯ ರವರ ಅವದಿಯಲ್ಲಿ ಆಗಿರುವ ಕಾನೂನು ದುರುಪಯೋಗ ಬಗ್ಗೆ ತನಿಖೆಗೆ ಒತ್ತಾಯಿಸಬೇಕು. ಯು ಟಿ ಖಾದರ್ ರವರ ಬಗ್ಗೆ ದೇಶ ವಿದೇಶದಲ್ಲಿ ಒಳ್ಳೆಯ ಅಭಿಪ್ರಾಯ ವಿರುವುದನ್ನು ಸಹಿಸಲಸಲಾಗದೆ ಅವರ ಉನ್ನತ ಬೆಳವಣಿಗೆ ಸಹಿಸಲಾಗದೆ ಅವರ ಹೆಸರಿ ಕಳಂಕ ತರುವ ದುರುದ್ದೇಶದಿಂದ ಅಪಾದನೆ ಮಾಡುತ್ತಿದ್ದಾರೆ ಯಾರು ಅವರ ಬಗ್ಗೆ ಅರೋಪ ಮಾಡುತ್ತಿದ್ದಾರೆ ಅವರ ಬಗ್ಗೆ ಮೊದಲು ತನಿಯಾಗಬೇಕು.ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಸರ್ವಜನರ ಪ್ರೀತಿ ಗಳಿಸಿದ ಇಡೀ ಕರ್ನಾಟಕದ ಅತ್ಯಂತ ಸೌಹಾರ್ದಯುತ ವ್ಯಕ್ತಿ ಖಾದರ್ ರವರು ಅವರ ಬಗ್ಗೆ ಅಪವಾದ ಮಾಡಿದವರ ವಿರುದ್ಧ ನಾವು ಕಟೋರವಾಗಿ ಖಂಡಿಸುತ್ತೇವೆ ಎಂದುಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ರವರು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ರವರ ವಿರುದ್ಧ ಮಾಡಿರುವ ಆರೋಪವನ್ನು ಖಂಡಿಸಿ ನ.3 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಮಾತನಾಡಿ ಯು ಟಿ ಖಾದರ್ ಒಬ್ಬ ಶ್ರೇಷ್ಠ ರಾಜಕಾರಣಿ ಅವರು ಶಾಸಕರಾಗಿ ಸಚಿವರಾಗಿ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವುದರೊಂದಿಗೆ ಸರ್ವರನ್ನೂ ಪ್ರೀತಿಸುವ ಗುಣವುಳ್ಳ ವ್ಯಕ್ತಿಯಾಗಿ ಇಡೀ ಸಮಾಜ ಅವರನ್ನು ಪ್ರೀತಿಸುವಂತಹ ಸಂದರ್ಭದಲ್ಲಿ ಅವರ ಘನತೆಗೆ ಅಗೌರವ ತರುವಂತಹ ಆರೋಪವನ್ನು ಮಾಡಿ ಅವರನ್ನು ಕುಗ್ಗಿಸುವಂತ ಹುನ್ನಾರ ನಡೆಯುತ್ತಿದೆ ಅದಕ್ಕೆ ನಾವು ತೀವ್ರವಾಗಿ ಖಂಡಿಸುತ್ತೆವೆ.ಸೂಡ ಅಧ್ಯಕ್ಷ ಕೆ ಎಂ ಮುಸ್ತಫಾ ರವರು ಮಾತನಾಡಿ ಯು ಟಿ ಖಾದರ್ ಸ್ಪೀಕರ್ ಆಗಿ ಅಧಿಕಾರ ಸ್ವಿಕರ್ ಆಗಿ ನೇಮಕಗೊಂಡಗಾ ಈ ಸಣ್ಣ ಪ್ರಾಯದಲ್ಲಿ ಅವರಿಂದ ಆ ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗಬಹುದ ಎಂಬ ಜಿಜ್ಞಾಸೆಯಿತು.ಅವರು ವಿಧಾನಸಭೆಯ ಸ್ಪೀಕರ್ ಆದ ಮೇಲೆ ಆದ ಬದಲಾವಣೆ ಇಡೀ ದೇಶಕ್ಕೆ ಮಾದರಿಯಾದಂತಹ ಪರಿವರ್ತನೆ ಮತ್ತು ಅಧುನಿಕರಣ ಇವರ ಅಭಿವೃದ್ಧಿಯ ಮೂಲಕ ಇಡೀ ಕರ್ನಾಟಕ ವಿಧಾನಸಭೆಯನ್ನು ಇಡೀ ದೇಶ ನೊಡುವುದಾಂತಗಿದೆ.ಸಾವಿರಾರು ವಿದ್ಯಾರ್ಥಿಗಳಿಗೆ,ಹಾಗೂ ಬೀದಿಬದಿ ವ್ಯಾಪರಿಗಳಿಗೆ ಅನೇಕ ಸಂಘ ಸಂಸ್ಥೆಗಳಿಗೆ ವಿಧಾನಸಭೆ ಕಲಾಪವನ್ನು ವೀಕ್ಷಿಸಲು ಅವಕಾಶ ಕೊಟ್ಟಂತ ಒರ್ವ ನೈಜ ರಾಜಕಾರಣಿ ಅವರ ಮೇಲೆ ಅರೋಪ ಮಾಡಿರುವುದು ಅವರ ಬೆಳವಣಿಗೆಯನ್ನು ಸಹಿಸಲಾರದೆ ಮಾಡಿರುವ ಅರೋಪ ಅದು ಖಂಡನಿಯ ಎಂದರು.















ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು .ಮಾತನಾಡಿ ಯು ಟಿ ಖಾದರ್ ರವರು ನಾವು ಬಾಲ್ಯದಿಂದಲೇ ಅವರನ್ನು ಪರಿಚಿತ ಯಾವುದೇ ಒಬ್ಬ ವ್ಯಕ್ತಿ ಅವರ ಬಳಿಯಲ್ಲಿ ಯಾವುದಾದರೂ ಕೆಲಸ ಹೋದರೆ ಪಕ್ಷ ,ಜಾತಿ ಯಾವುದನ್ನು ನೋಡದೆ ಕೆಲಸ ಮಾಡಿಕೊಡುವ ಜನ ಯು ಟಿ ಖಾದರ್ ಅವರ ಬಗ್ಗೆ ಮಾಡಿರುವ ಅರೋಪ ಅಧಾರಹಿತ ಅದನ್ನು ನಾವು ಬಹಳ ಕಟ್ಟುವಾಗಿ ವಿರೋಧಿಸುತ್ತೇವೆ ಎಂದರು.ಗೋಷ್ಠಿಯಲ್ಲಿ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೊಕ್ಕೊ,ರಾಜು ಪಂಡಿತ್,ಬಾಸ್ಕರ ಪೂಜಾರಿ ಉಪಸ್ಥಿತರಿದ್ದರು.
ಜಯಪ್ರಕಾಶ್ ರೈ ರಾಜಕೀಯ ನಿವೃತ್ತಿ ಬಗ್ಗೆ ಪತ್ರಕರ್ತ ಪ್ರಶ್ನೆಗೆ ಗೋಷ್ಠಿ ಭಾಗವಹಿಸಿದ ಕಾಂಗ್ರೆಸ್ ನಾಯಕರು ಉತ್ತರಿಸುತ್ತಾ ಜಯಪ್ರಕಾಶ್ ರೈ ಯವರಿಗೆ ನೋವಾಗಿದೆ ಅದನ್ನು ನಾವು ಸರಿಪಡಿಸುವ ಪ್ರಯುತ್ನ ಮಾಡುತ್ತೇವೆ ಅದರೊಂದಿಗೆ ಅವರಿಗೆ ರಾಜ್ಯದಲ್ಲಿ ಅವರಿಗೆ ಸೂಕ್ತಸ್ಥಾನಮಾನ ನೀಡುವಲ್ಲಿ ಶ್ರಮಿಸುತ್ತೇವೆ ಎಂದರು.










