ಕನ್ನಡದ ಬಗೆಗಿನ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸಲು ಹೊರಟ ಈ ಪ್ರಯತ್ನ ಶ್ಲಾಘನೀಯ: ಸಾಹಿತಿ ಪ್ರಭಾಕರ್ ಶಿಶಿಲ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಇದರ ಆಶ್ರಯದಲ್ಲಿ
ಅಮೃತ ಮಹೋತ್ಸವ ಸಮಿತಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು
ಇದರ ಸಹಕಾರದೊಂದಿಗೆ ಯು.ಸು.ಗೌ ಸ್ಮರಣಾರ್ಥ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ-೨೦೨೫ ನ.2 ರಂದು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ನಮ್ಮ ನಡೆ ವಿದ್ಯಾರ್ಥಿಗಳೆಡೆಗೆ ಎಂಬ ದ್ವೇಯ ವಾಕ್ಯದೊಂದಿಗೆ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ, ಚರ್ಚಾಗೋಷ್ಠಿ,ಹಾಗೂ ವಿವಿಧ ಸಾಂಸ್ಕೃತಿಕ ಕನ್ನಡ ಕಲರವ ಕಾರ್ಯಕ್ರಮಗಳು ಬೆಳಗ್ಗಿನಿಂದ ಸಂಜೆ ಯವರೆಗೆ ಅದ್ದೂರಿಯಾಗಿ ನಡೆಯಿತು.

ಸಮ್ಮೇಳನದ ಆರಂಭದಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಲಿಂಗಪ್ಪ ಗೌಡ ಕೇರ್ಪಳ ರವರು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ 10 ನೇಯ ತರಗತಿ ವಿದ್ಯಾರ್ಥಿನಿ ಕುಮಾರಿ ಪೌರ್ಣಮಿ ಕೆ ರವರು ವಹಿಸಿದ್ದರು.
ಹಿರಿಯ ಸಾಹಿತಿ ಪ್ರಭಾಕರ್ ಶಿಶೀಲಾ ರವರು ದೀಪ ಪ್ರಜ್ವಲನೆಯನ್ನು ಮಾಡಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ‘ಕನ್ನಡದ ಬಗೆಗಿನ ಆಸಕ್ತಿಯನ್ನು ವಿದ್ಯಾರ್ಥಿಗಳ ಜೀವನದಿಂದಲೇ ಬೆಳೆಸಿ ಕೊಡಬೇಕಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಕನ್ನಡಕ್ಕಾಗಿ ಮೊದಲ ಆದ್ಯತೆಯನ್ನು ನೀಡಿ ಮಕ್ಕಳ ಬಾಲ್ಯ ಜೀವನದಿಂದಲೇ ಕನ್ನಡದ ಕಂಪನ್ನು ಮೂಡಿಸಬೇಕು. ಮಕ್ಕಳ ನೇತೃತ್ವದಲ್ಲಿ ನಡೆಸುವ ಈ ಸಾಹಿತ್ಯ ಸಮ್ಮೇಳನ ಒಂದು ಮಾದರಿ ಸಮ್ಮೇಳನವಾಗಿದೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
















ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ವಿದ್ಯಾರ್ಥಿ ಆತ್ಮೀಯ ಕೆ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಸುಳ್ಯ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಪದ್ಮಾವತಿ ಯನ್. ಪಿ. ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಇದರ ರಾಮಚಂದ್ರ ಪಲ್ಲತಡ್ಕ, ಶಾಲಾ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಸುಳ್ಯ ಕ ಸಾ ಪ ಅಧ್ಯಕ್ಷರಾದ ಚಂದ್ರಶೇಖರ ಪೆರಾಲು, ಕೋಶಾಧಿಕಾರಿ ದಯಾನಂದ ಆಳ್ವಾ, ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ, ಕಾರ್ಯದರ್ಶಿ ಅಬ್ದುಲ್ಲಾ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.
ಕ ಸಾ ಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಾದ ವೈಷ್ಣವಿ ಕೆ ಹಾಗೂ, ಅಂಶಿಕ ಕೆ ಆರ್ ಕಾರ್ಯಕ್ರಮ ನಿರೂಪಿಸಿ ಗ್ರೀಷ್ಮಾ ಎಂ ಬಿ ವಂದಿಸಿದರು.
ಬಳಿಕ ೧೧.೩೦ ರಿಂದ ನಡೆದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇದರ ವಿದ್ಯಾರ್ಥಿನಿ ದೀಪಶ್ರೀ ಎ ಅಧ್ಯಕ್ಷತೆ ವಹಿಸಿದ್ದರು.
ಕವಿಗಳಾಗಿ ವಿದ್ಯಾರ್ಥಿಗಳಾದ ಕು.ನವ್ಯಶ್ರೀ ಕೆ. ಸ. ಪ. ಪೂ. ವಿದ್ಯಾಲಯಯ ಸುಳ್ಯ,ತನ್ವಿ ಎನ್. ಕೆ. ಸ.ಪ.ಪೂ. ವಿದ್ಯಾಲಯ ಸುಳ್ಯ ಪ್ರೌಢಶಾಲಾ ವಿಭಾಗ, ದೀಕ್ಷಿತಾ ಕೆ. ಆರ್. ಶ್ರೀ ಶಾರದಾ ಪ್ರೌಢಶಾಲೆ ಸುಳ್ಯ, ಕು.ಅಂಜನಾ ವಿ ಕೆ ಪಿ ಎಸ್ ಬೆಳ್ಳಾರೆ,ದೇಶಿತ ಹೆಚ್. ಆರ್ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ,
ಸಿಂಚನಾ ಪಿ ಎ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ,
ದುಶ್ಯಂತ ಕೆ. ಸ. ಪ. ಪೂ. ಕಾಲೇಜು ಸುಳ್ಯ,ಸಂಜನಾ ಯು. ಕೆ. ಸ್ನೇಹ ಪ್ರೌಢಶಾಲೆ ಸುಳ್ಯ, ಗುರುಪ್ರಿಯಾ ವಿದ್ಯಾಬೋಧಿನಿ ಪ್ರೌಢಶಾಲೆ, ಬಾಳಿಲ,ಪಾತಿಮತ್ ಶೈಮಾ ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ ಇವರುಗಳು ಭಾಗವಹಿಸಿದರು.
ಮಧ್ಯಾಹ್ನ ೧೨.೩೦ ರಿಂದ ೧.೩೦ – ಕನ್ನಡ ಕಲರವದ ಆಕರ್ಷಕ ನೃತ್ಯಗಳು ಹಾಗೂ ಕನ್ನಡ ಪದ್ಯಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸೇರಿದ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಸವಿಯನ್ನು ಪಡೆದರು.
ಬಳಿಕ ಸಮಾವೇಶದಲ್ಲಿ ಭಾಗವಹಿಸಿದ ಸರ್ವರಿಗೂ ಸಹಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಇದರ ಸವಿಯನ್ನು ಪಡೆದರು.
ಅಪರಾಹ್ನ ಗಂಟೆ ೦೧.೩೦ ರಿಂದ ೨.೩೦ ವಿದ್ಯಾರ್ಥಿ ಚರ್ಚಾ ಗೋಷ್ಠಿ ನಡೆದು ಡಿಜಿಟಲ್ ಯುಗದಲ್ಲಿ ಕನ್ನಡ ಭಾಷಾ ಬೆಳವಣಿಗೆ ಒಂದು ಸವಾಲು ಎಂಬ ವಿಷಯದಲ್ಲಿ ಗೋಷ್ಠಿ ನಡೆಯಿತು.
ಈ ಕಾರ್ಯಕ್ರಮದ ಸಮನ್ವಯಕಾರರಾಗಿ ಸುಳ್ಯ ಜೂನಿಯರ್ ಕಾಲೇಜ್ ನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರು ಭಾಗವಹಿಸಿದ್ದರು.
ಈ ಚರ್ಚಾ ಗೋಷ್ಠಿಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ವಿದ್ಯಾರ್ಥಿನಿ ಪ್ರೀಕ್ಷಾ ಎಂ, ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಆರಂತೋಡು ವಿದ್ಯಾರ್ಥಿನಿ ಗ್ರೀಷ್ಮಾ ಕೆ ಎಸ್, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ ವಿದ್ಯಾರ್ಥಿನಿ ಸುಶ್ಮಿತಾ ಬಿ, ಶ್ರೀ ಶಾರದಾ ಪ್ರೌಢಶಾಲೆ, ಸುಳ್ಯ ಇದರ ವಿದ್ಯಾರ್ಥಿನಿ ಸಮೀಕ್ಷಾ ಡಿ ಎಸ್,ಸರಕಾರಿ ಪ್ರೌಢಶಾಲೆ ಅಜ್ಜಾವರ ಇದರ ತಸ್ವಿತ್ ಕೆ, ಹಿದಾಯತುಲ್ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ವಿದ್ಯಾರ್ಥಿನಿ ಆಯುಷತ್ ಶಾನಿಬಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರೇಕ್ಷಕರನ್ನು ಮೂಕ ಪ್ರೇಕ್ಷಕರಾಗಿ ಮಾಡುವ ರೀತಿಯಲ್ಲಿ ಉತ್ತಮ ಚರ್ಚಾ ಗೋಷ್ಠಿ ನಡೆಯಿತು.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ
ಸಂಜೆ 3:30 ಗಂಟೆಗೆ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆದು ಇದರ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೆರಾಲು ರವರು ವಹಿಸಿದ್ದರು.
ಸಮಾರೋಪ ಭಾಷಣ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಯ ಎಂ ನಿರ್ವಹಿಸಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅನುಭವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಇದರ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ಕೆ, ಸಿಆರ್‌ಪಿ ಸುಳ್ಯ ಮಮತಾ ಪಡ್ಡಂಬೈಲು, ಶಾಲಾ ಸಹ ಶಿಕ್ಷಕರಾದ ಮಮತಾ ಮೂಡಿತಾಯ, ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಎಲ್ಲಾ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಧನ್ಯವಾದ ನಿರ್ವಹಣೆ ಎಲ್ಲವನ್ನು ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ನಿರ್ವಹಿಸಿದರು.










