















ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರ ಕಾರ್ಯದ ಸಲುವಾಗಿ ನೂತನ ಗುಡಿಯ ನಿರ್ಮಾಣ ಕಾರ್ಯಕ್ಕೆ ಮರದ ಕೆತ್ತನೆ ಕೆಲಸಕ್ಕೆ ಇಂದು ಚಾಲನೆ ನೀಡಲಾಯಿತು.
ಶಿಲ್ಪಿ ಜಯಕರ ಆಚಾರ್ಯ ರವರ ನೇತೃತ್ವದಲ್ಲಿ ಮರದ ಕೆಲಸ ನಡೆಯಲಿದ್ದು ಇಂದು ಬೆಳಗ್ಗೆ ದೈವಸ್ಥಾನದಲ್ಲಿ ಪ್ರಾರ್ಥಿಸಿ ಕೆಲಸ ಆರಂಭಿಸಲಾಯಿತು. ಆಡಳಿತ ಧರ್ಮದರ್ಶಿ ಪಿ. ಕೆ. ಉಮೇಶ್, ಸೋಮನಾಥ ಪೂಜಾರಿ, ತಿಮ್ಮಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.










