ನಾಳೆ ಬೆಳಿಗ್ಗೆ 8.30 ಕ್ಕೆ ಕುರುಂಜಿಭಾಗ್ ನಿಂದ ಸುಬ್ರಹ್ಮಣ್ಯದತ್ತ ಬೆಳ್ಳಿ ರಥಯಾತ್ರೆ ಆರಂಭ
ಇಂದು ಬೆಳಿಗ್ಗೆ ಕುಂದಾಪುರದ ಕೋಟೇಶ್ವರ ದೇವಸ್ಥಾನದಿಂದ ಆರಂಭವಾದ, ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸುವ ಬೆಳ್ಳಿರಥವು ಇದೀಗ ಸುಳ್ಯ ತಲುಪಿದ್ದು, ಇಂದು ರಾತ್ರಿ ಕಾಂತಮಂಗಲದ ಗುತ್ಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ತಂಗಲಿದೆ
















. ನಾಳೆ ಬೆಳಿಗ್ಗೆ ಸುಳ್ಯದಿಂದ ಸುಬ್ರಹ್ಮಣ್ಯ ಕಡೆಗೆ ರಥಯಾತ್ರೆ ಸಾಗಲಿದ್ದು, ಬೆಳಿಗ್ಗೆ 8.15 ಕ್ಕೆ ಕಾಂತಮಂಗಲದಿಂದ ಹೊರಟು , ಕುರುಂಜಿಭಾಗ್ ನಲ್ಲಿ ಕೆ.ವಿ.ಜಿ. ಕ್ಯಾಂಪಸ್ ಎದುರುಗಡೆ ಇರುವ ದಿ.ಡಾ.ವೆಂಕಟ್ರಮಣ ಗೌಡರ ಪ್ರತಿಮೆಯ ಎದುರಿಗೆ ಬರಲಿದೆ. ಸರಿಯಾಗಿ 8.30 ಕ್ಕೆ ಕೆ.ವಿ.ಜಿ. ಪ್ರತಿಮೆಯ ಎದುರಿನಿಂದ ರಥಯಾತ್ರೆ ಹೊರಟು ಸುಬ್ರಹ್ಮಣ್ಯದತ್ತ ಸಾಗುವುದೆಂದು ಬೆಳ್ಳಿರಥ ದಾನಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್ ಸುದ್ದಿಗೆ ತಿಳಿಸಿದ್ದಾರೆ.











