ನ.3ರಂದು ಸುಳ್ಯ ಜಟ್ಟಿಪಳ್ಳದಲ್ಲಿ ನಡೆದ ಅಪಘಾತದಿಂದ ರಿಕ್ಷಾದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅಟೋಚಾಲಕ ಪ್ರಭಾಕರ್ ರವರು ಇಂದು ಮುಂಜಾನೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.















ನ.3ರಂದು ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪ್ರಭಾಕರ್ ರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ರಿಕ್ಷಾ ಚಾಲಕರ ಸಂತಾಪ : ಪ್ರಭಾಕರ್ ರ ಅಕಾಲಿಕ ನಿಧನಕ್ಕೆ ಸುಳ್ಯ ಬಾಳೆಮಕ್ಕಿ ರಿಕ್ಷಾ ಚಾಲಕರು ಸಂತಾಪ ಸೂಚಿಸಿದ್ದಲ್ಲದೆ, ಈ ದಿನ ಶೋಕಾಚರಣೆ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.










