ಕಮಿಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕಮಿಲ ಮೊಗ್ರ ಘಟಸಮಿತಿ, ಸಾರ್ವಜನಿಕ ಕ್ರೀಡಾ ಸಮಿತಿ ಕಮಿಲ ಮೊಗ್ರ ವತಿಯಿಂದ ಕ್ರೀಡಾಕೂಟ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಸುಳ್ಯ ತಾಲೂಕು ಗುತ್ತಿಗಾರು ವಲಯ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಮಿಲ ಮೊಗ್ರ ಘಟಸಮಿತಿ ಹಾಗೂ ಸಾರ್ವ ಜನಿಕ ಕ್ರೀಡಾ ಸಮಿತಿ ಕಮಿಲ ಮೊಗ್ರ ಇದರ ವತಿಯಿಂದ ಸಾರ್ವ ಜನಿಕ ಕ್ರೀಡಾಕೂಟ ದ. ಕ. ಜಿ. ಪ. ಹಿ. ಪ್ರಾ. ಶಾಲೆ ಮೊಗ್ರದಲ್ಲಿ ನ. 2ರಂದು ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಮೊಗ್ರ ಇದರ ಆಡಳಿತ ಮೊಕ್ತಸರರಾದ ಕಾರ್ಯಪ್ಪ ಗೌಡ ಚಿಕ್ಮುಳಿ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ರೀಡಾ ಸಮಿತಿ ಕಮಿಲ ಮೊಗ್ರ ಅಧ್ಯಕ್ಷರಾದ ರಘುವೀರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಒ.ಶ್ರೀ.ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಒಡಿಯೂರು ಒ. ಶ್ರೀ. ಗ್ರಾ. ವಿ. ಯೋಜನೆ ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟಾರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸ. ಅಶೋಕ್ ನೆಕ್ರಾಜೆ, ಮೊಗ್ರ
ದ.ಕ.ಜಿ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಪರಶಿವಮೂರ್ತಿ, ಒ.ಶ್ರೀ.ಗ್ರಾ.ವಿ. ಯೋಜನೆಯ ಸುಳ್ಯ ತಾಲೂಕಿನ ಘಟಸಮಿತಿಯ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಒ.ಶ್ರೀ.ಗ್ರಾ.ವಿ. ಯೋಜನೆ ಗುತ್ತಿಗಾರು ವಲಯದ ವಲಯ ಅಧ್ಯಕ್ಷ ಜಯರಾಮ ಪೈಕ,
ಪ್ರೆಂಡ್ಸ್ ಕ್ಲಬ್ ಮೊಗ್ರ ಇದರ ಅಧ್ಯಕ್ಷ ವಸಂತ ಮೊಗ್ರ ಉಪಸ್ಥಿತರಿದ್ದರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ತಮ ಕಾರ್ಯನಿರ್ವಹಣೆ ಮಾಡಿದ ಮಣಿಕಂಠ ಮತ್ತು ಭಗವತಿ ಸಂಘವನ್ನು ಗುರುತಿಸಲಾಯಿತು. ಶ್ರೀ ಗುರು ಸಂಘದ ಸದಸ್ಯೆ ಶ್ರೀಮತಿ ರಮ್ಯ ಸ್ವಾಗತಿಸಿ, ಭಗವತಿ ಸಂಘದ ಸದಸ್ಯ ಮದುಕರ ವಂದಿಸಿದರು.
ಬಳಿಕ ಕ್ರೀಡಾ ಕೂಟ ನಡೆಯಿತು. ಕ್ರೀಡಾಕೂಟದ ನಿರ್ಣಾಯಕರಾಗಿ ಗುತ್ತಿಗಾರು ಗ್ತಾ.ಪಂ. ಸದಸ್ಯರುಗಳಾದ ಮಾಯಿಲಪ್ಪ ಮತ್ತು ಭರತ್ ಕಮಿಲ ಸಹಕರಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒ.ಶ್ರೀ.ಗ್ರಾ.ವಿ.ಯೋ. ಕಮಿಲ ಮೊಗ್ರ ಘಟ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಾರದ ಎಂ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಜಯಪ್ರಕಾಶ್ ಎ.ಆರ್. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ. ಸದಸ್ಯೆ ಶ್ರೀಮತಿ ಉಷಾ ಮಲ್ಕಜೆ, ಒ.ಶ್ರೀ.ಗ್ರಾ.ವಿ.ಯೋ. ಸುಳ್ಯ ತಾಲೂಕು ಘಟ ಸಮಿತಿಯ ನಿಕಟಪೂರ್ವ ಅಧ್ಯಕ್ಷ ವಿಶ್ವಾನಾಥ ಶೆಟ್ಟಿ, ಒ.ಶ್ರೀ.ಗ್ರಾ.ವಿ.ಯೋ. ಗುತ್ತಿಗಾರು ವಲಯದ ಸಂಯೋಜಕಿ ಶ್ರೀಮತಿ ಸವಿತಾ ಸಿ, ಪಂಜ
ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ್ ತೆಂಕಪ್ಪಾಡಿ, ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ,
ಕೆ.ಡಿ.ಪಿ. ಮಾಜಿ ಸದಸ್ಯ ಅಚ್ಚುತ ಬಿ,
ಜೆ.ಸಿ.ಐ. ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ ಜೀವನ್ ಮಲ್ಕಜೆ, ಮೊಗ್ರ ದ.ಕ.ಜಿ.ಪ.ಹಿ.ಪ್ರಾ. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಕಾಂತಿಲ
ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೊಗ್ರ ಘಟಸಮಿತಿ ಪದಾಧಿಕಾರಿಯರವನ್ನು ಸನ್ಮಾನಿಸಲಾಯಿತು. ನಂತರ ಬಹುಮಾನ ವಿತರಣೆ ಮಾಡಲಾಯಿತು. ಶ್ರೀಮತಿ ಶಿಶಿಮಾ ಜಾಕೆ ಸ್ವಾಗತಿಸಿ, ಒ.ಶ್ರೀ.ಗ್ರಾ.ವಿ.ಯೋ. ಕಮಿಲ ಮೊಗ್ರ ಘಟಸಮಿತಿ ಸೇವಾ ದೀಕ್ಷಿತೆ ಶ್ರೀಮತಿ ಭವ್ಯ ವಂದಿಸಿದರು. ಉದಿತ್ ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು.