ಆಟೋ ಚಾಲಕ ಪ್ರಭಾಕರರವರ ಪಾರ್ಥೀವ ಶರೀರದ ಮೆರವಣಿಗೆ, ಅಂತ್ಯಸಂಸ್ಕಾರ

0

ಅಪಘಾತದಲ್ಲಿ ಇಂದು ಬೆಳಿಗ್ಗೆ ನಿಧನರಾದ ಆಟೋ ಚಾಲಕ ಪ್ರಭಾಕರರವರ ಪಾರ್ಥೀವ ಶರೀರದ ಮೆರವಣಿಗೆಯು ಆಟೋ ಚಾಲಕರ ವತಿಯಿಂದ ಇಂದು ಸಂಜೆ ನಡೆಯಿತು.


ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಹೊರಟ ಮೆರವಣಿಗೆಯು ಸುಳ್ಯ ಪ್ರೈವೇಟ್ ಬಸ್ ನಿಲ್ದಾಣದವರೆಗೆ ತಂದು ಸುಳ್ಯದ ಗೋಪಿಕಾ ಬಿಲ್ಡಿಂಗ್ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇರಿಸಲಾಯಿತು. ನಂತರ ಮೃತದೇಹವನ್ನು ಅವರ ಮನೆ ಕುಕ್ಕುಂದೂರುಗೆ ಕರೆ ತಂದು ಅಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಆರ್.ಕೆ.ನಾಯರ್, ಯಾದವ ಸಂಘದ ಪದಾಧಿಕಾರಿಗಳು, ಊರವರು, ಬಂಧುಗಳು ಉಪಸ್ಥಿತರಿದ್ದರು.