ಡಾ.ಕೆ.ವಿ.ರೇಣುಕಾಪ್ರಸಾದರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥಕ್ಕೆ ವಳಲಂಬೆಯಲ್ಲಿ ಅದ್ದೂರಿ ಸ್ವಾಗತ

0

ಡಾ.ಕೆ.ವಿ.ರೇಣುಕಾಪ್ರಸಾದರವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ಇಂದು ಬೆಳಿಗ್ಗೆ ಸುಳ್ಯದಿಂದ ಹೊರಟು ವಲಳಂಬೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿತು.

ವಲಳಂಬೆಯಲ್ಲಿ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಥಕ್ಕೆ ಭಕ್ತಿ ಪೂರ್ವಕ ಸ್ವಾಗತ ಕೋರಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಬೆಳ್ಳಿರಥವನ್ನು ನೋಡಿ ಕಣ್ತುಂಬಿಗೊಂಡರು. ಸೇರಿದವರೆಲ್ಲರೂ ಬೆಳ್ಳಿ ರಥಕ್ಕೆ ಪುಷ್ಪಾರ್ಚನೆಗೈದರು.


ಈ ಸಂದರ್ಭದಲ್ಲಿ ಪ್ರಮುಖರಾದ ಮಿತ್ರದೇವ ಮಡಪ್ಪಾಡಿ, ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ವೆಂಕಟ್ ವಲಳಂಬೆ, ಎಂ. ಡಿ ವಿಜಯಕುಮಾರ್, ಕೇಶವ ಹೊಸಲಿಕೆ ಸೇರಿದಂತೆ ವಲಳಂಬೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಲಳಂಬೆಯಲ್ಲಿ ಮಧ್ಯಾಹ್ನ ಶ್ರೀ ಸುಬ್ರಮಣ್ಯ ದೇವರ ಪ್ರಸಾದ ಸ್ವೀಕರಿಸಿದ ರೇಣುಕಾ ಪ್ರಸಾದ್ ಕುಟುಂಬ ಅಲ್ಲಿ ಭೋಜನ ಮಾಡಿ ಅಲ್ಲಿಂದ ಸುಬ್ರಮಣ್ಯ ಕ್ಕೆ ತೆರಳಿದರು.