ಕರ್ನಾಟಕ – ಕೇರಳ ಗಡಿಭಾಗವಾಗಿರುವ ಪಂಜಿಕಲ್ಲು ಸಮೀಪ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.
















ನ.5ರಂದು ಸಂಜೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ವಿರಾಜಪೇಟೆಯ ನಂದಕಿಶೋರ್ ಎಂಬವರು ಕೆ.ಎ. 51 ಎಂ.ಡಿ. 6351 ರಲ್ಲಿ ಮಧೂರು, ಮಲ್ಲ ದೇವಸ್ಥಾನಗಳಿಗೆ ಹೋಗಿ ಹಿಂತಿರುಗುತ್ತಿದ್ದಾಗ ಪಂಜಿಕಲ್ಲು ತಲುಪುವ ವೇಳೆ ನಿದ್ರೆ ಬಂದಂತಾಗಿ ಎದುರಿನಿಂದ ಬರುತ್ತಿದ್ದ ದೇಲಂಪಾಡಿಯ ಮೋಹನ ಎಂಬವರ ಆಲ್ಟೋ ಕಾರಿಗೆ ಢಿಕ್ಕಿಯಾಯಿತು.
ನಂದಕಿಶೋರ್‌ರ ಕಾರು ವಿರುದ್ಧ ದಿಕ್ಕಿನತ್ತ ಬರುವುದನ್ನು ಗಮನಿಸಿದ ಮೋಹನ್ ರವರು ತಮ್ಮ ಕಾರನ್ನು ರಸ್ತೆಯಿಂದ ಕೆಳಗೆ ಇಳಿಸಿದರಾದರೂ ಆ ವೇಳೆಗೆ ನಂದ ಕಿಶೋರ್ ರ ಕಾರು ಢಿಕ್ಕಿಯಾಯಿತು. ಪರಿಣಾಮ ಮೋಹನ ರ ಕಾರಿನ ಒಂದು ಬದಿಯ ಎರಡೂ ಡೋರ್ ಸೇರಿದಂತೆ, ಹಿಂಬದಿ ಟಯರ್‌ಭಾಗ ಕಿತ್ತುಬಂದಿದೆ. ನಂದ ಕಿಶೋರ್ ರ ಕಾರು ಕೂಡಾ ಜಖಂ ಗೊಂಡಿದೆ. ಯಾವುದೇ ಗಾಯಗಳಾಗಿಲ್ಲ.
ಸುದೀರ್ಘ ಮಾತುಕತೆಯ ಬಳಿಕ ಮೋಹನರ ಕಾರು ರಿಪೇರಿಗೆ ಹಣ ನೀಡುವುದಾಗಿ ಹೇಳಿದರಿಂದ ರಾಜಿ ಇತ್ಯರ್ಥ ವಾಯಿತೆಂದು ತಿಳಿದುಬಂದಿದೆ.










