ಅಧ್ಯಕ್ಷತೆ ಯಾರಾಗಬೇಕೆಂಬ ಜಿಜ್ಞಾಸೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿಯ ಪೂರ್ವ ಭಾವಿ ಸಭೆ ಇಂದು ದೇವಸ್ಥಾನದ ಆಡಳಿತ ಕಛೇರಿಯಲ್ಲಿ ನಡೆದಿದ್ದು ಈ ವೇಳೆ ಸಭೆಯ ಅಧ್ಯಕ್ಷತೆ ಯಾರಾಗಬೇಕು ಎಂದು ಸಭೆ ಅಂತ್ಯಕ್ಕೆ ಜಿಜ್ಞಾಸೆ ಎದ್ದಿತು.















ಸಭೆಯ ನೋಟೀಸ್ ನಲ್ಲಿ ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವುದಾಗಿ ನೊಟೀಸು ನೀಡಲಾಗಿತ್ತು. ಆದರೆ ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರ ನೇತೃತ್ವದಲ್ಲಿ ಸಭೆಯಲ್ಲಿ ನಡೆಯಲಿರುವುದಾಗಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸಭೆಗೆ ತಿಳಿಸಿದರು. ಸಭೆಯ ಅಂತ್ಯದಲ್ಲಿ ಶಾಸಕರು ಮಾತನಾಡುವ ಸಮಯ ಬಂದಾಗ ಎಲ್ಲರೂ ತಮ್ಮ ಹಕ್ಕು ಮಾತನಾಡುತ್ತೀರಿ. ಈ ಸಭೆಗೆಯಲ್ಲಿ ಸಭೆ ಅಧ್ಯಕ್ಷತೆ ಯಾರಿಗೆ ಎಂದು ಪ್ರಶ್ನಿಸಿದರು.
ಈ ವೇಳೆ ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಪೂರ್ವಭಾವಿ ಸಭೆಗೆ ಪ್ರೋಟೋಕಾಲ್ ಇಲ್ಲ. ಇಲ್ಲಿನ ಆಡಳಿತ ನಿರ್ಧಾರವೇ ಅಂತಿಮ ಎಂದರು.










