Home Uncategorized ಚಂಪಾ ಷಷ್ಠಿ ಜಾತ್ರಾಮಹೋತ್ಸವ : ರಥಗಳಿಗೆ ಗೂಟ ಪೂಜೆ

ಚಂಪಾ ಷಷ್ಠಿ ಜಾತ್ರಾಮಹೋತ್ಸವ : ರಥಗಳಿಗೆ ಗೂಟ ಪೂಜೆ

0

ಚಂಪಾ ಷಷ್ಠಿ ಜಾತ್ರಾಮಹೋತ್ಸವದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಎಳೆಯುವ ರಥಗಳಿಗೆ ಕಾರ್ತಿಕ ಹುಣ್ಣಿಮೆಯ ದಿನವಾದ ನ.5 ರಂದು ಗೂಟ ಪೂಜೆ ನಡೆಯಿತು.

ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಆರಂಭದಲ್ಲಿ ರಥಗಳಿಗೆ ಅಳವಡಿಸುವ ಗೂಟಗಳಿಗೆ ವೈಧಿಕ ವಿದಿ ವಿಧಾನಗಳ ಮೂಲಕ ಪೂಜೆ ನೆರವೇರಿತು. ಬಳಿಕ ಗೂಟಗಳಿಗೆ ಶ್ರೀ ದೇವರ ಪ್ರಸಾದ ಹಚ್ಚಿದರು.

ನಂತರ ಮೂಲ ನಿವಾಸಿಗಳಾದ ಮಲೆ ಕುಡಿಯ ಜನಾಂಗದವರು ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ ಬ್ರಹ್ಮರಥ ಮತ್ತು ಪಂಚಮಿ ರಥಗಳಿಗೆ ಗೂಟ ಅಳವಡಿಸಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು , ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಿತರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking