ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ಏಕಾಹ ಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವ

0

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18ಪೇಟೆ ದೇವಸ್ಥಾನಗಳಲ್ಲೊಂದಾದ
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ಏಕಾಹಭಜನೆ ಮತ್ತು ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ. 2ರಂದು ಆರಂಭಗೊಂಡಿದ್ದು, ನ. 6ರ ತನಕ ನಡೆಯಲಿದೆ.


ನ. 2ರಂದು ಸಂಜೆ ಪ್ರಾರ್ಥನೆ, ದೀಪೋಜ್ವಲನ, ಬೆಳಿಗ್ಗೆ ಗಂಟೆ 6ರ ತನಕ ಅಹೋರಾತ್ರಿ ಏಕಹಾ ಭಜನೆ, ರಾತ್ರಿ 12 ಕ್ಕೆ ಮಹಾಪೂಜೆ ನಡೆಯಿತು. ನ. 3ರಂದು ರಾತ್ರಿ ದೇವರು ತುಲಸೀಕಟ್ಟೆಯಲ್ಲಿ ಆಸೀನರಾಗಿ ತುಲಸೀಪೂಜೆ, ಉತ್ಥಾನ ದ್ವಾದಶಿ, ರಾತ್ರಿ ಪಲ್ಲಕಿ ಉತ್ಸವ, ವಸಂತೋತ್ಸವ ಇತ್ಯಾದಿ ನಡೆಯಿತು. ನ. 4ರಂದು ರಾತ್ರಿ ಪಲ್ಲಕಿ ಉತ್ಸವ, ವಸಂತೋತ್ಸವ, ಕಾರ್ತಿಕ ಮಂಗಲ ತ್ರಯೋದಶಿ ಉತ್ಸವ, ವೈಕುಂಠ ಚತುರ್ದಶಿ ಉತ್ಸವ ನಡೆಯಿತು.

ನ. 5ರಂದು ಕಾರ್ತಿಕ ಪೌರ್ಣಮಿ – ಲಕ್ಷದೀಪ ನಡೆಯಿತು. ಬೆಳಿಗ್ಗೆ ಪ್ರಾರ್ಥನೆ, ದೇವರು ವನಕ್ಕೆ ಚಿತ್ತೈಸುವುದು, ಧಾತ್ರಿಹೋಮ, ವನಭೋಜನ, ಸಂಜೆ ಲಾಲ್ಕಿ ಉತ್ಸವ, ಕಟ್ಟೆಪೂಜೆ, ಪಲ್ಲಕಿ ಉತ್ಸವ ವಸಂತೋತ್ಸವ ನಡೆಯಿತು. ನ. 6ರಂದು ಬೆಳಿಗ್ಗೆ 10ರಿಂದ ಅವಭೃತೋತ್ಸವ, ಅವಭೃತ ಸ್ನಾನ, ದ್ವಾದಶ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ಬಳಿಕ ಭೂರಿಭೋಜನ ನಡೆಯಲಿದೆ. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಸುರೇಶ್ ಶೆಣೈ ಸೇರಿದಂತೆ ಮೊಕ್ತೇಸರರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.