ಯುವಕರ ಜೂನಿಯರ್, ಸಬ್ ಜೂನಿಯರ್ 56 ಮತ್ತು 60 ಕೆ. ಜಿ ವಿಭಾಗದ ಸ್ಪರ್ಧೆ ಆರಂಭ

ಕರ್ನಾಟಕ ರಾಜ್ಯ ವೈಟ್
ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಇವರ ಮಾನ್ಯತೆಯೊಂದಿಗೆ
ಸುಳ್ಯಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ಆಯೋಜನೆಯಲ್ಲಿ
ಸಂಘಟನಾ ಸಮಿತಿ ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್
ಮತ್ತು ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ನಡೆಯುವ
ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಗೆ ನ. 7 ರಂದು ಚಾಲನೆ ನೀಡಲಾಯಿತು.
















ಅಪರಾಹ್ನ ಜೂನಿಯರ್ ಮತ್ತು ಸಬ್ ಜೂನಿಯರ್ ಯುವಕರ ವಿಭಾಗದ ಸಿ ಗ್ರೂಪ್ ನಲ್ಲಿ 56, 60 ಕೆ. ಜಿ ಯ ಭಾರ ಎತ್ತುವ ಸ್ಪರ್ಧೆಯು ಆರಂಭ ಗೊಂಡಿತು.
ಯುವಜನ ಸಂಯುಕ್ತ ಮಂಡಳಿಯ ಎದುರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾದ ಆಕರ್ಷಕ ಇಂಡೋರ್ ಸ್ಟೇಡಿಯಂ ನಲ್ಲಿ 1 ಮತ್ತು 2 ಸಂಖ್ಯೆಯ ಕೋರ್ಟಿನಲ್ಲಿ ಸ್ಪರ್ಧೆಯು ಆರಂಭ ಗೊಂಡಿತು.

ಇಂದಿನಿಂದ ಮೂರು ದಿನಗಳು ಸ್ಪರ್ಧೆಯು ನಿರಂತರವಾಗಿ ನಡೆಯಲಿರುವುದು.
ರಾಜ್ಯದ ಸುಮಾರು 360 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.












