ಯಾದವ ಸಭಾ ಕೇಂದ್ರ ಸಮಿತಿ, ಸಲಹಾ ಮಂಡಳಿ, ತಾಲೂಕು ಸಮಿತಿಗಳ ಯುವ ಮತ್ತು ಮಹಿಳಾ ವೇದಿಕೆ ಹಾಗೂ ಎಲ್ಲಾ ಪ್ರಾದೇಶಿಕ ಸಮಿತಿಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನ. ೯ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
















ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯಾದವ ಸಭಾ ಕೇಂದ್ರ ಸಮಿತಿ ಕಾರ್ಯದರ್ಶಿ ಸದಾನಂದ ಕಾವೂರು, ಕೋಶಾಧಿಕಾರಿ ಚಂದ್ರಶೇಖರ ಅಳಿಕೆ, ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಆಸ್ಪಾರೆ, ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಆಲೆಟ್ಟಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಜಯಕೃಷ್ಣ ಕಾಯರ್ತೋಡಿ, ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಯುವವೇದಿಕೆ ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ, ಪುತ್ತೂರು, ಬಂಟ್ವಾಳ, ಮಂಗಳೂರು ಪ್ರಾದೇಶಿಕ ಸಮಿತಿಯ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಮುಂದಿನ ವರ್ಷದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಸದಾನಂದ ಕಾವೂರು ಪ್ರಾಸ್ತಾವಿಕ ಮಾತನಾಡಿದರು. ಕರುಣಾಕರ ಹಾಸ್ಪಾರೆ ಸ್ವಾಗತಿಸಿ, ಸಾವಿತ್ರಿ ಕಣೆಮರಡ್ಕ ವಂದಿಸಿದರು.










