ಗಲ್ಫ್ ಬಾಯ್ಸ್ ಹಳೆಗೇಟು ವತಿಯಿಂದ ಊರಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ. 9 ರಂದು ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಡಿಗ್ರಿ ಕಾಲೇಜಿನ ಮೈದಾನದಲ್ಲಿ ನಡೆಯಿತು.
















ಗಲ್ಫ್ ಬಾಯ್ಸ್ ಹಳೆಗೇಟು ವತಿಯಿಂದ ದಿ. ಸತ್ಯನಾರಾಯಣ ಕೆ.ಯವರ ಸ್ಮರಣಾರ್ಥ 6ನೇ ವರ್ಷದ ನಡೆದ 12 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸುದ್ದಿ ವರದಿಗಾರ ಹಸೈನಾರ್ ಜಯನಗರ, ಪತ್ರಕರ್ತೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕು. ನವಮಿ ಜಯನಗರರವರಿಗೆ ಸನ್ಮಾನ ಮಾಡಲಾಯಿತು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸನ್ಮಾನ ಕಾರ್ಯ ನೆರವೇರಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಜಯನಗರ ಕೊರಂಬಡ್ಕ ಕೊರಗಜ್ಜ ದೈವಸ್ಥಾನದ ಕಾರ್ಯದರ್ಶಿ ಸುಂದರ ಜಯನಗರ, ಹಳೆಗೇಟು ಶಿವಾಜಿ ವೃಂದದ ಮುಖೇಶ್ ಹಳೆಗೇಟು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಂಜಿತ್ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದ ಆಯೋಜಕರು ಮಜೀದ್ ಕುತ್ತಮಟ್ಟೆ ಹಾಗೂ ಆಸಿಫ್ ಜಯನಗರ ಸಹಕರಿಸಿದರು










