
ಅಜ್ಜಾವರ ಧನಲಕ್ಷ್ಮಿ ಮಹಿಳಾ ಮಂಡಲ ರಿಜಿಸ್ಟರ್ ಇದರ ವತಿಯಿಂದ ಶಂಕರ ಭಾರತಿ ವೇದಪಾಠ ಶಾಲೆ ಇದರ ವಾರ್ಷಿಕ ಮಹಾ ಸಭೆ ನ.8 ರಂದು ಅಜ್ಜಾವರ ಬಯಂಬುವಿನಲ್ಲಿ ನಡೆಯಿತು.
ವೇದಿಕೆಯಲ್ಲಿ ಧನಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷರಾದ ಕವಿತ ಪುರುಷೋತ್ತಮ್ಮ,ಸ್ಥಾಪಕ ಅಧ್ಯಕ್ಷರಾದ ಜಯಂತಿ ಜನಾರ್ದನ, ಗೌರವಾಧ್ಯಕ್ಷರಾದ ನಳಿನಾಕ್ಷಿ ಪ್ರಸಾದ್ ಅಡ್ಪಂಗಾಯ , ಮಹಿಳಾ ಮಂಡಲದ ಕಾರ್ಯದರ್ಶಿ ಜಯಶ್ರೀ ನಾಗೇಶ್ ಬೇಲ್ಯ, ಕೋಶಾಧಿಕಾರಿ ಹರಿಣಾಕ್ಷಿ ಉದಯ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
















ಕಾರ್ಯಕ್ರಮವನ್ನು ವೇದಾವತಿ ಬಾಲಚಂದ್ರ ಮುಡೂರು ಪ್ರಾರ್ಥನೆ ನೆರವೇರಿಸಿ ರಮ್ಯಾ ಭವಾನಿ ಶಿರಾಜೆ ಸ್ವಾಗತಿಸಿ ಹಾಗೂ ಭಾಗೀರಥಿ ಗೋಪಾಲಕೃಷ್ಣ ಅಡ್ಡಂತಡ್ಕ ವಂದಿಸಿ ವಿಮಲಾ ಅರುಣಾ ಪಡ್ಡಂಬೈಲು ನಿರೂಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಕೊನೆಗೆ ಶಾಂತಿ ಮಂತ್ರ ಹೇಳಿ ಕಾರ್ಯಕ್ರಮ ಮುಗಿಸಲಾಯಿತು.










