ಶಾಂತಿನಗರ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಪ್ರಾರ್ಥನಾ ಸಂಗಮ

0

ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಶಿಯೇಷನ್‌ ವತಿಯಿಂದ ನಡೆಯುತ್ತಿರುವ ಮಾಸಿಕ ಸ್ವಲಾತ್ ಕಾರ್ಯಕ್ರಮ ನ.9 ರಂದು ಶಾಂತಿನಗರ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.

ಸ್ವಲಾತ್ ಮತ್ತು ದುವಾ ನೇತೃತ್ವವನ್ನು ಅಸ್ಸಯ್ಯದ್ ಝೖನುಲ್ ಆಬಿದೀನ್ ತಂಙಳ್ ಜಯನಗರ ರವರು ನೆರವೇರಿಸಿದರು.

ಉದ್ಯೋಧನಾ ಕಾರ್ಯಕ್ರಮವನ್ನು ಅಡ್ಕಾರು ಜುಮಾ ಮಸೀದಿಯ ಖತೀಬರಾದ ಉಸ್ತಾದ್ ಮುನೀರ್ ಸಅದಿ ಅಲ್-ಅರ್ಷದಿ ರವರು ನಿರ್ವಹಿಸಿ ಸ್ವಲಾತಿನ ಮಹತ್ವದ ಬಗ್ಗೆ ಮಾತನಾಡಿದರು.ಪ್ರಾಸ್ತಾವಿಕ ಭಾಷಣವನ್ನು ಸ್ಥಳೀಯ ಮದ್ರಸದ ಸದರ್ ಮುಅಲ್ಲಿಮ್ ಅಬ್ದುರಶೀದ್ ಝೖನಿ ಪೆರಾಜೆ ಯವರು ಮಾಡಿದರು.

ವೇದಿಕೆಯಲ್ಲಿ ಮದ್ರಸ ಸಮಿತಿಯ ಅಧ್ಯಕ್ಷರಾದ ಹಾಜಿ ಪಳ್ಳಿ ಕುಂಞಿ,ಜಯನಗರ ಮದ್ರಸಾ ಸದರ್ ಮುಅಲ್ಲಿಮ್ ಶಫೀಕ್ ನಹೀಮಿ, ಅಶ್ರಫ್ ಅಂಜುಮಿ ಉಸ್ತಾದ್ ಜಯನಗರ, ಜಯನಗರ ಮಸೀದಿ ಮತ್ತು ಮದ್ರಸಾ ಸಮಿತಿ ಅಧ್ಯಕ್ಷ ಹನೀಫ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು.