
ಝೀ ಕನ್ನಡ ಟಿ.ವಿ. ಚಾನೆಲ್ ನ ಜನಪ್ರಿಯ ಶೋ ʼಮಹಾನಟಿ ಸೀಸನ್ -2ʼ ವಿನ್ನರ್ ಆಗಿ ಸುಳ್ಯದ ವಂಶಿ ಹಿರಿಯಡ್ಕ ಆಯ್ಕೆಯಾಗಿದ್ದಾರೆ.
ನ.9 ರಂದು ನಡೆದ ಮಹಾನಟಿ ಫಿನಾಲೆಯಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಬೆಳಗಾವಿಯ ಕು.ವರ್ಷಾ ಡಿಗ್ರಜೆ ಹಾಗೂ ಕು.ವಂಶಿ ಹಿರಿಯಡ್ಕ ಅವರಲ್ಲಿ ವಂಶಿ ಹಿರಿಯಡ್ಕ ವಿನ್ನರ್ ಆಗಿದ್ದಾರೆಂದು ಘೋಷಿಸಲಾಯಿತು. ವರ್ಷಾ ರನ್ನರ್ ಅಪ್ ಆದರು.















ಅಮರ ಮುಡ್ನೂರು ಗ್ರಾಮದ ಹಿರಿಯಡ್ಕ ನಿವಾಸಿಯಾಗಿದ್ದ ದಿ. ರತ್ನ ಕುಮಾರ್ ಹಿರಿಯಡ್ಕರವರ ಪುತ್ರಿಯಾದ ವಂಶಿಯವರು, 8 ವರ್ಷಗಳ ಹಿಂದೆ ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ವಿಜೇತರಾಗಿದ್ದರು. ಇವರು ಈಗ ಮಂಗಳೂರಿನಲ್ಲಿ ನೆಲೆಸಿದ್ದಾರೆ.











