ಜಾಲ್ಸೂರಿನ ಬೊಳುಬೈಲು ನಿವಾಸಿ ದಯಾನಂದ ಕಡಪಳರವರು ನ. 11ರಂದು ಮಧ್ಯಾಹ್ನ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ನ. 10 ರಂದು ಮಧ್ಯರಾತ್ರಿ ತನ್ನ ಮನೆಯಲ್ಲಿ ಬ್ರೈನ್ ಹ್ಯಾಮರೇಜ್ ಗೆ ಒಳಗಾದ ಅವರನ್ನು ಕೂಡಲೇ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಿನ ಜಾವ 5 ಗಂಟೆಗೆ ಮಂಗಳೂರಿನ ಫಸ್ಟ್ ನ್ಯೂರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನ. 11ರಂದು ಪೂರ್ವಾಹ್ನ ಮತ್ತೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆ ತರಲಾಗಿತ್ತು.
ಆದರೆ ತೀವ್ರ ನಿಗಾ ಘಟಕದಲ್ಲಿದ್ದ ಅವರು ಮಧ್ಯಾಹ್ನ 2.30 ಕ್ಕೆ ನಿಧನರಾದರು.















ಮೃತರು ತಾಯಿ ಶ್ರೀಮತಿ ಪಾರ್ವತಿ ಕಡಪಳ, ಪತ್ನಿ ಶ್ರೀಮತಿ ಭುವನೇಶ್ವರಿ,
ಪುತ್ರಿಯರಾದ ಶ್ರೀಮತಿ ವೃಂದಾ ಘನಶ್ಯಾಮ್ ಕಟ್ರುಮನೆ, ಶ್ರೀಮತಿ ಸ್ಪಂದಾ ಕಾರ್ತಿಕ್ ಪಟೇಲ್ ಮನೆ, ಮೊಮ್ಮಕ್ಕಳು, ಸಹೋದರರು, ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ನಾಳೆ (ನ. 12) : ಅಂತಿಮ ಸಂಸ್ಕಾರ
ಮೃತರ ಅಂತಿಮ ಸಂಸ್ಕಾರ ಕಾರ್ಯಕ್ರಮ ನ. 12ರಂದು ಬೆಳಗ್ಗೆ 10 ಗಂಟೆಗೆ ಬೊಳುಬೈಲು ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.










