ನ. 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಅಂಚೆ ಮೂಲಕ ಕಥೆ ಹಾಗೂ ನಾನು ಓದಿದ ಪುಸ್ತಕ” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಪತ್ರಕರ್ತರಾದ ವಿನೋದ್ ಮೂಡಗದ್ದೆ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಬರಹಗಾರರಾದ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.

ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನವೆಂಬರ್ 16ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಆಯೋಜಕರಾದ ಯೋಗೀಶ್ ಹೊಸೊಳಿಕೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಶಿಕ್ಷಕರಾದ ರೂಪವಾಣಿ.ಬಿ ಹಾಗೂ ಶ್ರೀಮತಿ ಪೂರ್ಣಿಮಾ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ “ನಾನು ಓದಿದ ಪುಸ್ತಕ” ಪ್ರಬಂಧ ಸ್ಪರ್ಧೆಯ ಫಲಿತಾಂಶ
ಪ್ರಥಮ – ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಧೃತಿ.ಎಂ.ಜೆ ಮರಕತ
ದ್ವಿತೀಯ – ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಜನ್.ಎ.ಜೆ
ತೀರ್ಪುಗಾರರ ಮೆಚ್ಚುಗೆ ಪಡೆದ ಸ್ಪರ್ಧಿಗಳು – ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆಖ್ಯಾತ್.ರೈ ಹಾಗೂ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ಆಮಿನಾ ಮರ್ಜಾನ
“ಕಥೆ ಸ್ಪರ್ಧೆ”ಯ ಫಲಿತಾಂಶ
ಪ್ರಥಮ – ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಧೃತಿ.ಎಂ.ಜೆ ಮರಕತ
ದ್ವಿತೀಯ – ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ಆಮಿನಾ ಮರ್ಜಾನ















ಪದವಿಪೂರ್ವ ಕಾಲೇಜು ವಿಭಾಗದ “ಕಥೆ ಸ್ಪರ್ಧೆ”ಯ ಫಲಿತಾಂಶ
ಪ್ರಥಮ – ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೇಘ.ಹೆಚ್.ಕೆ
ದ್ವಿತೀಯ – ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ರಕ್ಷಾ.ಕೆ.ಬಿ
“ನಾನು ಓದಿದ ಪುಸ್ತಕ” ಪ್ರಬಂಧ ಸ್ಪರ್ಧೆಯ ಫಲಿತಾಂಶ
ಪ್ರಥಮ – ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಮಾನ್ಯಶ್ರೀ.ಕೆ.ಎಂ
ದ್ವಿತೀಯ – ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಧಾತ್ರಿ.ಎಂ.ಜೆ ಮರಕತ
ತೀರ್ಪುಗಾರರ ಮೆಚ್ಚುಗೆ ಪಡೆದ ಸ್ಪರ್ಧಿಗಳು – ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ರಕ್ಷಾ.ಕೆ.ಬಿ
ಸಾರ್ವಜನಿಕ ವಿಭಾಗದ “ಪ್ರಬಂಧ ಸ್ಪರ್ಧೆ”ಯ ಫಲಿತಾಂಶ
ಪ್ರಥಮ – ಶ್ರೀಮತಿ ರೇಖಾ ಶ್ರೀನಿವಾಸ್ ಮುನಿಯೂರು, ವಿಂದ್ಯಾ.ಎಸ್.ರೈ ಕುರುಂಬ್ಲಾಜೆಗುತ್ತು
ದ್ವಿತೀಯ – ಅಶ್ವಿನಿ.ಪಿ, ವಿಮಲಾರುಣಾ ಪಡ್ಡಂಬೈಲು
ತೀರ್ಪುಗಾರರ ಮೆಚ್ಚುಗೆ ಪಡೆದ ಸ್ಪರ್ಧಿಗಳು – ತೇಜಸ್ವಿನಿ.ಕೆ, ಬಿ.ನವೀನಾ ರೈ, ಅಪೂರ್ವ ಕೊಲ್ಯ, ಸ್ಮಿತಾ ಮರಕತ, ಸೀತಾ.ಕೆ, ನಿಶಾ.ಯಂ.ಬಿ, ಆಜ್ಞ ಕುತ್ಯಾಳ
“ಕಥೆ” ಸ್ಪರ್ಧೆಯ ಫಲಿತಾಂಶ
ಪ್ರಥಮ – ವಸಂತಿ.ಟಿ ನಿಡ್ನೆ, ರೇಖಾ ಶ್ರೀನಿವಾಸ್ ಮುನಿಯೂರು
ದ್ವಿತೀಯ – ಶ್ರೀಮತಿ ಬಿ.ನವೀನಾ ರೈ
ತೀರ್ಪುಗಾರರ ಮೆಚ್ಚುಗೆ ಪಡೆದ ಸ್ಪರ್ಧಿಗಳು – ವಿಮಲಾರುಣಾ ಪಡ್ಡಂಬೈಲು, ಸೀತಾ.ಕೆ, ಎಂ.ಎ ಮುಸ್ತಫಾ ಬೆಳ್ಳಾರೆ, ತೇಜಸ್ವಿನಿ.ಕೆ, ಶಿಲ್ಪಾ.ಎಂ.ಎಸ್.










