Home Uncategorized ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನೂತನ ಒಸಾಟ್ ಕಟ್ಟಡ ಲೋಕಾರ್ಪಣೆ

ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನೂತನ ಒಸಾಟ್ ಕಟ್ಟಡ ಲೋಕಾರ್ಪಣೆ

0

ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಓಸಾಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ : ಕು.ಭಾಗೀರಥಿ ಮುರುಳ್ಯ

ಈ ಶಾಲೆಯ ಶಿಕ್ಷಕ ವೃಂದದವರ ಶ್ರಮದ ಫಲದಿಂದ ಯೋಜನೆ ಇಲ್ಲಿಗೆ ಬಂದಿದೆ :ಗುರು ಪಾಂಗಾಳ್

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಸಾಟ್ ಸಂಸ್ಥೆ ಬೆಂಗಳೂರು ಇವರ 112 ನೇ ಪ್ರಾಜೆಕ್ಟ್ ಆಗಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಕೊಠಡಿಗಳ ನೂತನ ಸುಸಜ್ಜಿತ ಕಟ್ಟಡ ನ 11ರಂದು ಲೋಕಾರ್ಪಣೆಗೊಂಡಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥೀ ಮುರುಳ್ಯ ರವರು ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಓಸಾಟ್ ಸಂಸ್ಥೆಯು ನಮ್ಮ ಕ್ಷೇತ್ರದಲ್ಲಿ ಎರಡನೆಯ ಬಾರಿಗೆ ಈ ರೀತಿಯ ಉತ್ತಮ ಕೆಲಸ ಕಾರ್ಯವನ್ನು ಮಾಡಿದೆ.
ಈ ಮೊದಲು ಬೆಳ್ಳಾರೆ ಕೆಪಿಎಸ್ ಶಾಲೆಗೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದರು.ಇದೀಗ ಸುಳ್ಯ ಜೂನಿಯರ್ ಕಾಲೇಜಿಗೆ ಅದೇ ರೀತಿಯ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಕೊಡುವಲ್ಲಿ ಸಂಪೂರ್ಣ ಸಹಕಾರವನ್ನು ಮಾಡಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈ ಸಂಸ್ಥೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಆದುದರಿಂದ ಈ ಸಂಸ್ಥೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ನಾಗರಿಕರ ಪರವಾಗಿ ನಾನು ಅಭಿನಂದನೆಗಳನ್ನು ಹಾಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಳಿಕ ದಾನಿಗಳಾದ ಓಸಾಟ್ ಸಂಸ್ಥೆಯ ಗುರು ಪಾಂಗಾಳ್, ಶ್ರೀಮತಿ ಸಂಧ್ಯಾ ಹಾಗೂ ಶ್ರೀಮತಿ ನಿರ್ಮಲಾ ಜೈ ಪುಲ್ಲೂರು ರವರುಗಳು ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು.
ಬಳಿಕ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯರುಗಳು ನೂತನ ತರಗತಿ ಕೊಠಡಿಯಲ್ಲಿ ಇರಿಸಲಾಗಿದ್ದ 60 ಅಣತೆಗಳಿಗೆ ದೀಪವನ್ನು ಹಚ್ಚಿ ತರಗತಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಓಸಾಟ್ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ನೂತನ ಶೌಚಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಬಳಿಕ ಅತಿಥಿಗಳನ್ನು ವಿದ್ಯಾರ್ಥಿಗಳು ಬ್ಯಾಂಡ್ ಜಾಥಾ ದೊಂದಿಗೆ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆಗೆ ಕರೆದೊಯ್ದರು.
ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.
ಇದರ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾನಿಗಳಾದ ಗುರು ಪಾಂಗಾಲ್ ಹಾಗೂ ಮತ್ತೋರ್ವ ಧಾನಿಗಳಾದ ಶ್ರೀಮತಿ ಸಂದ್ಯಾ ರವರು ಮಾತನಾಡಿ ‘ ಈ ಯೋಜನೆ ಸುಳ್ಯದ ಈ ಶಾಲೆಗೆ ಬರಲು ಇಲ್ಲಿಯ ಶಿಕ್ಷಕ ವೃಂದದವರೇ ಮೂಲ ಕಾರಣ.ಶಾಲೆಯ ವಿದ್ಯಾರ್ಥಿಗಳ ಗಣನೀಯವಾದ ಸಂಖ್ಯೆ,ಹಾಗೂ ಶಾಲೆಯ ಚಟುವಟಿಕೆಗಳು, ಶಾಲೆಯ ಬೆಳವಣಿಗೆ ಇವೆಲ್ಲದರ ಹಿಂದೆ ಶಿಕ್ಷಕರ ಪಾತ್ರ ಕಾರಣವಾಗಿದ್ದು ಇವರ ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭಿಸಲು ಸಾಧ್ಯವಾಗಿದೆ.
ಈ ದೃಷ್ಟಿಯಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಒಂದು ಕಟ್ಟಡದ ಅವಶ್ಯಕತೆ ಇರುವುದನ್ನು ಮನಗೊಂಡ ನಾವು ಸಂಸ್ಥೆಯಿಂದ ಈ ಯೋಜನೆಯನ್ನು ಇಲ್ಲಿ ನೀಡಲು ಸಾಧ್ಯವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಕರ್ನಾಟಕ ಸರ್ಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್, ಒಸಾಟ್ ಸಂಸ್ಥೆಯ ಟ್ರಸ್ಟಿ ಬಾಲಕೃಷ್ಣ, ಶಾಲಾ ಪ್ರಾಂಶುಪಾಲರಾದ ಮೋಹನ್ ಕುಮಾರ್ ಬೊಮ್ಮೆಟ್ಟಿ, ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ, ನಗರ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಶಶಿಕಲಾ ನೀರಬಿದ್ರೆ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ,ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಸೂಡ ಅದ್ಯಕ್ಷ ಕೆ ಎಂ ಮುಸ್ತಫ ಜನತಾ, ನ ಪಂ ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅರಂಬೂರು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋಟಿ ವೆಚ್ಚದಲ್ಲಿ ಸುಸಜ್ಜಿತಾ ಕಟ್ಟಡವನ್ನು ನೀಡಿದ ಓಸಾಟ್ ಧಾನಿಗಳಾದ ಗುರು ಪಾಂಗಾಳ್, ಶ್ರೀಮತಿ ನಿರ್ಮಲ ಜೈ ಪುಲ್ಲೂರು, ಶ್ರೀಮತಿ ಸಂಧ್ಯಾ, ಹಾಗೂ ಸಂಸ್ಥೆಯ ಟ್ರಸ್ಟಿ ಬಾಲಕೃಷ್ಣ, ಹಾಗೂ ಸಂಸ್ಥೆಯ ಪ್ರತಿನಿಧಿ ಕಿಶೋರ್, ಗುತ್ತಿಗೆದಾರ ಕೆ ಎಲ್ ಉಪಾಧ್ಯಾಯ, ಇಂಜಿನಿಯರ್ ನಾಗೇಶ್, ಹಾಗೂ ಸಿಬ್ಬಂದಿ ಹನುಮಂತು ಇವರನ್ನು ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಭಾ ವೇದಿಕೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸನ್ಮಾನ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಲಾ ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಓಸಾಟ್ ಸಂಸ್ಥೆ ನೀಡಿದ ಕಟ್ಟಡದ ಕುರಿತು ಪ್ರಾಸ್ತವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಶಿಕ್ಷಕ ಸುಂದರ ಕೇನಾಜೆ ವಂದಿಸಿದರು.
ಶಿಕ್ಷಕರುಗಳಾದ ಮಮತಾ ಮೂಡಿತಾಯ, ಶ್ರೀಮತಿ ವೀಣಾ ಕೆ ಕೆ, ಶ್ರೀಮತಿ ಹೇಮಲತಾ ಸಹಕರಿಸಿದರು.

NO COMMENTS

error: Content is protected !!
Breaking