ಉಬರಡ್ಕ ಗ್ರಾಮದ ಪಾನತ್ತಿಲ ನಿವಾಸಿ, ಡಿ ಕೆ ಮಾಧವ, (78 ವರ್ಷ) ಎಂಬವರು ಇಂದು ಮುಂಜಾನೆ ಉಬರಡ್ಕದ ಅವರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.















ಪ್ರಗತಿಪರ ಕೃಷಿಕರಾಗಿದ್ದ ಅವರು ಇತ್ತೀಚೆಗೆ ತನ್ನ ತೋಟದಲ್ಲಿ ದೈತ್ಯ ಆಫ್ರಿಕನ್ ಬಸವನ ಹುಳುಗಳು ಕಾಣಿಸಿಕೊಂಡಿದ್ದು ಸ್ವತಃ ಅವರೇ ಹುಳಗಳನ್ನು ಸುದ್ದಿ ಕಚೇರಿಗೆ ತಂದು ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು. ಈ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಮಕ್ಕಳನ್ನು, ಬಂದು ಮಿತ್ರರನ್ನು ಅಗಲಿದ್ದಾರೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.










