















ಅ. 26ರಂದು ನಿಧನರಾದ ನಾಲ್ಕೂರು ಗ್ರಾಮದ ನಡುಗಲ್ಲು ನಿವಾಸಿ ಕೆ.ಸಿ. ಮುತ್ತಣ್ಣ ಗೌಡರಿಗೆ ನುಡಿನಮನ ಕಾರ್ಯಕ್ರಮ ನ. 12ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಬಿ ಚಂದ್ರಶೇಖರರು ಮೃತರಿಗೆ ನುಡಿನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಪುತ್ರ ಬಾಲಕೃಷ್ಣ ನಡುಗಲ್ಲು, ಪುತ್ರಿ ಶ್ರೀಮತಿ ಪ್ರೇಮ ಅಶೋಕ್ ಬೆಳ್ಳಿಪ್ಪಾಡಿ ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.











