ಕೆವಿಜಿ ಲಾ ಕಾಲೇಜಿನಲ್ಲಿ ಸಾಮಾಜಿಕ ಮಾಧ್ಯಮದ ಸುರಕ್ಷತೆ ಮತ್ತು ಕಾನೂನು ಅರಿವು – ನೆರವು ಕಾರ್ಯಕ್ರಮ

0

ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ನೆರವು ಘಟಕದ ಆಶ್ರಯದಲ್ಲಿ ನ. 13ರಂದು “ಸಾಮಾಜಿಕ ಮಾಧ್ಯಮದ ಸುರಕ್ಷತೆ ಮತ್ತು ಕಾನೂನು ಅರಿವು–ನೆರವು ಕಾರ್ಯಕ್ರಮ” ವನ್ನು ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ ವಹಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಕೆ. ವಿ. ಜಿ ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಸಂಯೋಜಕಿ ಶ್ರೀಮತಿ ರಚನಾ ಕೆ, ಕಾನೂನು ನೆರವು ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಪ್ರಕಾಶ್ ಏನ್. ಟಿ ಹಾಗೂ ಕಾನೂನು ನೆರವು ಘಟಕದ ಸಹ ಕಾರ್ಯದರ್ಶಿ ಸಮೀಕ್ಷಾ ಕೆ.ವಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಕಾಶ್ ಎನ್. ಟಿ ಸಾಮಾಜಿಕ ಮಾಧ್ಯಮದ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು.


ಮಂಜುನಾಥ್ ಎಸ್. ಎಸ್ ಸೈಬರ್ ಅಪರಾಧ ಮತ್ತು ಸುರಕ್ಷತೆ ಬಗ್ಗೆ,
ವಿಜಯ್ ಕೆ ಮಕ್ಕಳ ಹಕ್ಕುಗಳ ಕುರಿತಾಗಿ ಮಾತನಾಡಿದರು. ಕಾನೂನು ನೆರವು ಘಟಕದ ಸದಸ್ಯರು ಕಿರು ನಾಟಕ ಪ್ರದರ್ಶಿಸಿದರು. ಶ್ರೀ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಮ್ಯ ಕೆ. ಎಮ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾನೂನು ನೆರವು ಘಟಕದ ಸಂಯೋಜಕಿ ಶ್ರೀಮತಿ ರಚನಾ ಕೆ ವಂದಿಸಿದರು.