ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಪೋಷಕ/ ಶಿಕ್ಷಕರ ಮಹಾಸಭೆ ಮತ್ತು ಮಕ್ಕಳ ದಿನಾಚರಣೆ

0

ಮುರುಳ್ಯ ಶಾಂತಿನಗರ
ಸ.ಹಿ.ಪ್ರಾ. ಶಾಲೆಯಲ್ಲಿ ನ. 14ರಂದು ಮಕ್ಕಳ ದಿನಾಚರಣೆ ಮತ್ತು ಪೋಷಕ/ಶಿಕ್ಷಕರ ಮಹಾಸಭೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ನಡುಬೈಲು ವಹಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯೆ ಶ್ರೀಮತಿ ಶೀಲಾವತಿ ಗೊಳ್ತಿಲ, ಏಣ್ಮೂರು ಕ್ಲಸ್ಟರ್ ನ ಸಿ.ಆರ್.ಪಿ ಜಯಂತ ಕಳತ್ತಜೆ ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಬೇಬಿ ಮತ್ತು ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.


ಪಂಡಿತ ಜವಾಹರಲಾಲ್ ನೆಹರುರವರ ಜನ್ಮದಿನ ಆಚಾರಿಸಿಲಾಯಿತು. ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಲಾಭಿಮಾನಿಗಳು ಸಿಹಿ ತಿಂಡಿ, ಬಾಳೆಹಣ್ಣು ಕೇಕ್ ಮತ್ತು ಮಧ್ಯಾಹ್ನ ಬಿಸಿಯೂಟಕ್ಕೆ ಪಾಯಸ ನೀಡಿದರು.


ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ ಸ್ವಾಗತಿಸಿ, ಶಿಕ್ಷಕಿ ಹರ್ಷಿತ ವಂದಿಸಿದರು. ಶಿಕ್ಷಕ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಉಷಾ ಹೇಮಳ, ಶಾಲಿನಿ ಶಾಂತಿನಗರ, ಶಕುಂತಲ ಯಂ,
ಲಿಕ್ಷಿತ ಮತ್ತು ಬಿಸಿಯೂಟ ಸಿಬ್ಬಂದಿಗಳು ಸಹಕರಿಸಿದರು.