ಮರ್ಕಂಜದ ಶಾಸ್ತಾವು ಯುವಕ ಮಂಡಲದ ಸದಸ್ಯ, ನಿರೂಪಕ, ಶಿವಪಂಚಾಕ್ಷರಿ ಭಜನಾ ಮಂಡಳಿಯ ಸದಸ್ಯ, ಮರ್ಕಂಜ ಗ್ರಾಮದ ರೆಂಜಾಳ ನಿವಾಸಿ ಐತ ಎಂಬವರು ನಿನ್ನೆ ರಾತ್ರಿ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ ಸುಮಾರು 55 ವರ್ಷ ಪ್ರಾಯವಾಗಿತ್ತು. ಅವರು ಕೆಲ ಸಮಯಗಳಿಂದ ಕ್ಯಾನ್ಸರ್ ಖಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
















ಐತ ರವರು ಶಾಸ್ತಾವು ಯುವಕ ಮಂಡಲದಲ್ಲಿ ಜತೆ ಕಾರ್ಯದರ್ಶಿ ಯಾಗಿ, ಸಕ್ರಿಯ ಸದಸ್ಯರಾಗಿ, ಬೊಳ್ಳಾಜೆ ಹಳೆ ವಿದ್ಯಾರ್ಥಿ ಸಂಘ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಗುರುತಿಸಿಗೊಂಡಿದ್ದರು. ರೆಂಜಾಳದ ಶಿವಪಂಚಾಕ್ಷರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿ ಉತ್ತಮ ಗಾಯಕರಾಗಿದ್ದರು. ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ, ಕ್ರೀಡಾ ಕೂಟದ ವೀಕ್ಷಕ ವಿವರಣೆಗಾರರಾಗಿಯೂ ಗುರುತಿಸಿ ಕೊಂಡಿದ್ದರು. ರೆಂಜಾಳ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಮೃತರು ತಾಯಿ ಗುಳ್ಳಿ, ಸಹೋದರ ಪೋಡಿಯ, ಸಹೋದರಿ ಮೀನಾಕ್ಷಿ, ಪತ್ನಿ ಸುಶೀಲ, ಇಬ್ಬರು ಪುತ್ರರಾದ ಸುಜಿತ್, ಸಂದೀಪ್










