ಖಾಸಗಿ ಬಸ್ ನಿಲ್ದಾಣದಲ್ಲಿ ಕಾರಿಗೆ ಡಿಕ್ಕಿಯಾದ ಲಾರಿ – ಲಾರಿ ಚಾಲಕನ ಮೇಲೆ ಕಾರು ಚಾಲಕನಿಂದ ಹಲ್ಲೆ

0

ಗುಂಪು ಸೇರಿದ ಜನರಿಂದ ಕಾರು ಚಾಲಕನ ಮೇಲೆ ತೀವ್ರ ಆಕ್ರೋಶ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ಹೆದ್ದಾರಿ ಬದಿ ನಿಲ್ಲಿಸಿದ್ದ ವ್ಯಾಗನರ್ ಕಾರಿನ ಹಿಂಬದಿಗೆ ಮಡಿಕೇರಿ ಕಡೆಯಿಂದ ಬಂದ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾಯಿತು. ಇದರಿಂದಾಗಿ ಕಾರಿನ ಹಿಂಬದಿ ಬ್ರೇಕ್ ಲೈಟ್ ಹುಡಿಯಾಯಿತು. ಇದನ್ನು ಪ್ರಶ್ನಿಸಿದ ಕಾರು ಚಾಲಕ ಕಾರಿನಿಂದ ಇಳಿದು ಬಂದು ಏಕಾ ಏಕಿಯಾಗಿ ಲಾರಿ ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿ ಜಮಾಯಿಸಿದ ಜನ ಹಲ್ಲೆ ನಡೆಸಿದನ್ನು ಪ್ರಶ್ನಿಸಿ ಕಾರು ಚಾಲಕನನ್ನು ತರಾಟೆಗೆತ್ತಿ ಗೊಂಡರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನು ಠಾಣೆಗೆ ಕರೆದೊಯ್ದರು. ಪ್ರತಿ ದಿನ ರಸ್ತೆ ಬದಿ ನಿಲ್ಲಿಸಿ ಎಲ್ ಇ ಡಿ ಬಲ್ಬ್ ಮಾರಾಟ ಮಾಡುವವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.