ಗ್ರಾಮ ಪಂಚಾಯತ್ ಪೆರುವಾಜೆ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರವು ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ.16 ರಿಂದ ಪ್ರಾರಂಭಗೊಳ್ಳಲಿದ್ದು ನ.30 ರವರೆಗೆ ನಡೆಯಲಿದೆ.
ನ.16 ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.















ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉದ್ಘಾಟನೆ ಮಾಡಲಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ನ ಮಾಲಕ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಮಾಹಿತಿ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೆರುವಾಜೆ ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಪಿ.ಎಸ್, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶಹಿನಾಜ್,ಪ್ರಗತಿಪರ ಕೃಷಿಕ ಮೋಹನ್ ಬೈಪಾಡಿತ್ತಾಯ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಮಾಲಾ,ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿರುವರು.
ಶಿಬಿರವು ಪ್ರತೀದಿನ ಬೆಳಿಗ್ಗೆ ಗಂಟೆ 10.00 ರಿಂದ ಅಪರಾಹ್ನ ಗಂಟೆ 4.00 ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9901333123,9164298414










