















ಅರಂತೋಡು:ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ 136ನೇ ಜನ್ಮದಿನ ಅಂಗವಾಗಿ ಮಕ್ಕಳ ದಿನಾಚರಣೆ , ಎಥ್ನಿಕ್ ಡೇ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ – Glimpses 2025 ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ನೂತನ ಸಂಚಾಲಕರಾದ ಎ. ಸಿ. ವಸಂತ್ ನೆರವೇರಿಸಿ, ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾಲೇಜು ವಿದ್ಯಾರ್ಥಿ ನಾಯಕ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಗುರು ಸೋಮಶೇಖರ ಸ್ವಾಗತಿಸಿದರು.ಶಾಲಾ ನಾಯಕ ಪವನ್ ವಂದಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ, ಸಾಂಸ್ಕೃತಿಕ ಕಾರ್ಯಕ್ರಮ ಮಾರ್ಗದರ್ಶಕರಾದ ಭಾಗ್ಯಶ್ರೀ, ಮನೋಜ್ ಉಪಸ್ಥಿತರಿದ್ದರು. ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಮೋಹನ್ ಚಂದ್ರ ಸಹಕರಿಸಿದರು.

ಸಂಸ್ಥೆಯ ಎಲ್ಲಾ ತರಗತಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.ವಿದ್ಯಾಲಯದ 600 ವಿದ್ಯಾರ್ಥಿಗಳು ಬಣ್ಣ ಬಣ್ಣದ ಸಾಂಪ್ರದಾಯಿಕ ವಸ್ತ್ರ ಧರಿಸಿ ಸಂಭ್ರಮಿಸಿದರು. ನೃತ್ಯ,ಹಾಡು, ಮಿಮಿಕ್ರಿ, ಜಾಗೃತಿ ಮೂಡಿಸುವ ಕಿರುನಾಟಕ, ಮೈಮ್, ಭಾಷಣ, ಸಮೂಹ ಗೀತೆ , ಮನೋರಂಜನೆ ಆಟಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಸಹಕರಿಸಿದರು.ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡಲಾಯಿತು. ಉಪನ್ಯಾಸಕರಾದ ಮೋಹನ್ ಚಂದ್ರ ಮತ್ತು ಅಶ್ವಿನಿ ಕೆ.ಎಂ ಸಿಹಿ ನೀಡಿ ಸಹಕರಿಸಿದರು.










