
ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ಮಾನವಿಕ, ವಾಣಿಜ್ಯ, ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳ ಪಠ್ಯ ಪೂರಕ ಚಟುವಟಿಕೆಯ ಭಾಗವಾಗಿ “ಸಂಭ್ರಮ 2k25” ಅಂತರ್ ತರಗತಿ ವಿವಿಧ ಸ್ಪರ್ಧೆಗಳನ್ನು ನ. 15ರಂದು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಜೀವನದಲ್ಲಿ ಕಲಿಕೆ ನಿರಂತರವಾದುದು. ಕ್ರಿಯಾಶೀಲತೆ, ಸೃಜನಶೀಲತೆ ಬಹಳ ಮುಖ್ಯ. ನಿಮ್ಮ ಸಾಧನೆಗೆ ಈ ಕಾರ್ಯಕ್ರಮ ಪ್ರೇರಣೆ ನೀಡಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿಯ ಕೂರ್ಗ್ ಮೆಡಿಕಲ್ ಸೈನ್ಸ್ಸ್ ಇಲ್ಲಿನ ಸಹಾಯಕ ಪ್ರಾಧ್ಯಾಪಕಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ. ತಾರಾ ರೋಷನ್ ಮಾತನಾಡಿ ಆತ್ಮ ವಿಶ್ವಾಸ, ಪ್ರಯತ್ನ, ತಾಳ್ಮೆ ಇವೆಲ್ಲವೂ ಯಶಸ್ಸಿನ ಮೆಟ್ಟಿಲಿಗೆ ದಾರಿಗಳು. ಪೂಜ್ಯ ಕೆವಿಜಿಯವರ ಬದುಕಿನ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕ, ಈ ಕಾಲೇಜು ನನ್ನ ಬದುಕನ್ನು ರೂಪಿಸಿದೆ ಎಂದರು. ಕಾರ್ಯಕ್ರಮದ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದರು. ಗೌರವ ಉಪಸ್ಥಿತರಾಗಿ ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಉಪಸ್ಥಿರಿದ್ದರು.















ವಿದ್ಯಾರ್ಥಿನಿಯರಾದ ಸಿಂಚನ ಮತ್ತು ಬಳಗದವರು ಪ್ರಾರ್ಥಿಸಿದರು. ಮಾನವಿಕ ಸಂಘದ ಸಂಚಾಲಕಿ ರೇಷ್ಮಾ ಎಂ ಸ್ವಾಗತಿಸಿ, ವಿಜ್ಞಾನ ವಿಭಾಗದ ಸಂಚಾಲಕಿ ಸುಚೇತಾ ಎಂ ವಂದಿಸಿದರು. ವಾಣಿಜ್ಯ ವಿಭಾಗದ ಸಂಚಾಲಕಿ ಹರ್ಷಿತ ಎ.ಬಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿ.ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು. ಸಮಾರೋಪ ಭಾಷಣ ನೆರವೇರಿಸಿ ಮಾತನಾಡಿದ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ ಮಾತನಾಡಿ ನಿಮ್ಮ ಅಂತರ್ಗತ ಪ್ರತಿಭೆ ಹೊರ ಬರುವಲ್ಲಿ ಮೌಲ್ಯಯುತ ಬದುಕು, ಶ್ರದ್ಧೆ, ನಾಯಕತ್ವ, ಸೃಜನ ಶೀಲತೆ ಬಹಳ ಮುಖ್ಯ, ಸಾಧಕರ ಸಾಧನೆಯ ಹಾದಿ ನಮ್ಮ ಬದುಕಿಗೆ ಪ್ರೇರಣೆ ಎಂದರು. ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಭಾಗವಹಿಸುವಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವಿ. ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಉಪಸ್ಥಿತರಿದ್ದು, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಅಶ್ವಿತಾ ಎ.ಸಿ ಸ್ವಾಗತಿಸಿ, ಗೀತಾ ಎನ್ ಅತಿಥಿಗಳನ್ನು ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ, ಕಾರ್ಯಕ್ರಮ ಸಂಯೋಜಕರಾದ ವಿನಯ್ ನಿಡ್ಯಮಲೆ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿ ರಾಜೇಶ್ವರಿ ಎ ವಂದಿಸಿದರು.










