ವರ್ಣಚಿತ್ತಾರ – 2025 ಶುಭಾರಂಭ

0

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಕ್ಲಬ್ ಸುಳ್ಯ, ಇಂಟರ್ಯಾಕ್ಟ್ ಕ್ಲಬ್ ಸುಳ್ಯ, ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್ ಸೈಟ್, ಸುದ್ದಿ ಚಾನೆಲ್ ಸುಳ್ಯ , ರೋಟರಿ ಶಾಲೆ ಮಿತ್ತಡ್ಕ ಇವುಗಳ ಆಶ್ರಯದಲ್ಲಿ16 ನೇ ವರ್ಷದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ 2025 ಇಂದು ಸುಳ್ಯ ರಥಬೀದಿಯ ರೋಟರಿ ಶಾಲಾ ಆವರಣದಲ್ಲಿ ಶುಭಾರಂಭಗೊಂಡಿತು.

ರೋಟರಿ ವಿದ್ಯಾಸಂಸ್ಥೆಯ ಸಂಚಾಲಕರಾದ ಪ್ರಭಾಕರನ್ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್ ಸಭಾಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್, ಉಪನ್ಯಾಸಕರೂ ಸಾಹಿತಿಗಳೂ ಆದ ಡಾ.ಸುಂದರ ಕೇನಾಜೆ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ, ಸುದ್ದಿ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ, ದ.ಕ.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಹುಮಾನ ಪ್ರಾಯೋಜಕರಾದ ಅನಂತರಾಜ ಮಾಯ್ಪನ ಮತ್ತು ಸ್ವರ್ಣಂನ ಪ್ರವೀಣ್, ರೋಟರಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ವೀಣಾ ಶೇಡಿಕಜೆ, ಶ್ರೀಮತಿ ಜ್ಯೋತ್ಸ್ನಾ ದಿನೇಶ್ ಶುಭಹಾರೈಸಿದರು.

ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ನ ಸಂಚಾಲಕರುಗಳಾದ ಶ್ರೀಹರಿ ಪೈಂದೋಡಿ ಸ್ವಾಗತಿಸಿ, ಪ್ರಸನ್ನ ಐವರ್ನಾಡು ವಂದಿಸಿದರು.