ಸುಳ್ಯ ಪೊಲೀಸ್ ಠಾಣೆಯ ಬಳಿ ಪುಟ್ಪಾತ್ನ ಕಾಡುಬಳ್ಳಿಗಳ ತೆರವು
ಸುಳ್ಯದ ಮುಖ್ಯಬೀದಿಯಾದ ಪೊಲೀಸ್ ಠಾಣೆ ಸಮೀಪ ಸಾರ್ವಜನಿಕರು ನಡೆದಾಡಲು ಉಪಯೋಗಿಸುವ ಪುಟ್ಪಾತ್ ಬಳಿ ಕಾಡುಬಳ್ಳಿ ಆವರಿಸಿ ನಡೆದಾಡಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನವಂಬರ್ ೧೮ರಂದು ಸುದ್ದಿ ವೆಬ್ಸೈಟಿನಲ್ಲಿ ವರದಿ ಬಿತ್ತರಿಸಲಾಗಿತ್ತು.















ವರದಿಗೆ ಸ್ಪಂದನೆ ಎಂಬಂತೆ ೨೪ ಗಂಟೆಯಲ್ಲಿ ಸಂಬಂಧಪಟ್ಟವರು ರಸ್ತೆ ಬದಿಯ ಕಾಡುಬಳ್ಳಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ನಡೆದಾಡಲು ಉತ್ತಮ ಪರಿಸರವನ್ನು ನಿರ್ಮಿಸಿದ್ದಾರೆ.
ತಕ್ಷಣದ ಈ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ.










