ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಬೆಳ್ಳಾರೆಯ ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವತಿಯಿಂದ ಮಕ್ಕಳ ದಿನಾಚರಣೆ ನಡೆಯಿತು. ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷರಾದ ಗುಲಾಬಿಯವರು ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಜಯಲಕ್ಷ್ಮಿ ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಭವ್ಯ, ಬೆಳ್ಳಾರೆ ವಲಯ ಶ್ರೀ ಧನಲಕ್ಷ್ಮಿ ಗೊಂಚಲು ಸಮಿತಿಯ ಅಧ್ಯಕ್ಷರಾದ ರೇಷ್ಮಾ, ಸ್ತ್ರೀಶಕ್ತಿ ಗುಂಪುಗಳ ಎಲ್ಲಾ ಸದಸ್ಯರು, ಬಾಲವಿಕಾಸ ಸಮಿತಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಂಗನವಾಡಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಈ ಬಹುಮಾನದ ಪ್ರಾಯೋಜಕತ್ವವನ್ನು ಸ್ತ್ರೀಶಕ್ತಿ ಗುಂಪಿನ ಸದಸ್ಯರಾದ ಸುಜಾತ ರವರು , ಹಾಗು ಚಾ ತಿಂಡಿ ಪ್ರಾಯೋಜಕತ್ವವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಭವ್ಯರವರು ವಹಿಸಿಕೊಂಡಿದ್ದರು. ಕಲ್ಲೋಣಿ ಅಂಗನವಾಡಿಯ ಕಾರ್ಯಕರ್ತೆಯಾದ ಪಾಪಕುಮಾರಿಯವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.