ರೈಟ್ ಟು ಲೈವ್ ಫೌಂಡೇಶನ್ ಬೆಂಗಳೂರು ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ಇಲ್ಲಿಗೆ ರೂ.82,500/-ಮೌಲ್ಯದ ಇನ್ವರ್ಟರ್ ಮತ್ತು 4 ಬ್ಯಾಟರಿಗಳನ್ನು ಕೊಡುಗೆಯಾಗಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್ ಯು.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.















ಇದೇ ಸಂದರ್ಭದಲ್ಲಿ ರೈಟ್ ಟು ಲೈವ್ ಫೌಂಡೇಶನ್ ನ
ಗಣಪಯ್ಯ ಪೆರುವಾಜೆ ಹಾಗೂ ಸುಳ್ಯ ತಾಲೂಕು ಸಂಚಾಲಕರಾದ ಪ್ರದೀಪ್ ಉಬರಡ್ಕ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಕಛೇರಿಯ ಪ್ರಭಾರ ಅಧೀಕ್ಷಕ ಶಿವಪ್ರಸಾದ್.ಕೆ.ವಿ. ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರು, ಶಿಕ್ಷಣ ಸಂಯೋಜಕರು, ಅಧೀಕ್ಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.










