ಕನಕಮಜಲು : ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು

0

ಚಾಲಕನ ನಿಯಂತ್ರಣ ತಪ್ಪಿ‌ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ನ.20ರಂದು ಸಂಜೆ ಕನಕಮಜಲಿನಿಂದ ವರದಿಯಾಗಿದೆ.

ಮೈಸೂರಿನಿಂದ ಕುಂದಾಪುರಕ್ಕೆ ಹೋಗುತಿದ್ದ ಕಾರು ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಕ್ಕದ ಜಾಗದಲ್ಲಿ ಹೊಂಡವೊಂದಕ್ಕೆ ಬಿತ್ತು.‌ ಚಾಲಕ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.