ನ.25-29 : ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಸಂಭ್ರಮ

0

ಪುತ್ತೂರು: ಸುಮಾರು 800 ವರುಷಗಳ ಇತಿಹಾಸವಿರುವ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಸಂಭ್ರಮದಿಂದ ನೆರವೇರಲಿದೆ.

ನ.25ರಿಂದ 29ರವರೆಗೆ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯಲಿದೆ.

ನ.25 ಮಂಗಳವಾರದಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ಸನ್ನಿಧಿಯಿಂದ ಹೊರೆಕಾಣಿಕೆ ಸ್ವೀಕಾರ. ರಾತ್ರಿ 7ರಿಂದ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಮಹಾಪೂಜೆ ಜರಗಲಿದೆ. ನ.26 ಬುಧವಾರದಂದು ಷಷ್ಠಿ ಮಹೋತ್ಸವ ಜರಗಲಿದ್ದು, ಬೆಳಗ್ಗೆ 7ರಿಂದ ಗಣಪತಿ ಹವನ, ಚಂಡಿಕಾ ಹವನ, ನವಕ ಕಲಶ, ರುದ್ರಾಭಿಷೇಕ, ಪಲ್ಲಪೂಜೆ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ತಾಯಂಬಕಂ- ನೇರಳತ್ತಾಯ ದೈವದ ಭಂಡಾರ ತೆಗೆಯುವುದು, ಮಹಾಪೂಜೆ, ದೇವರ ಬಲಿ ಉತ್ಸವ, ಪ್ರಸಾದ ವಿತರಣೆ, ನೇರಳತ್ತಾಯ ದೈವದ ನೇಮೋತ್ಸವ ನೆರವೇರಲಿದೆ.

ನ.27 ಗುರುವಾರದಂದು ಬೆಳಗ್ಗೆ 10ರಿಂದ ಏಕಾದಶ ರುದ್ರಾಭಿಷೇಕ, ರಕ್ತೇಶ್ವರಿ ತಂಬಿಲ, ರಕ್ತೇಶ್ವರಿ ದೈವದ ಭಂಡಾರ ತೆಗೆಯುವುದು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 8ರಿಂದ ಮಹಾಪೂಜೆ, ರಂಗಪೂಜೆ ರಾತ್ರಿ 10ರಿಂದ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ನಡೆಯಲಿದೆ. ನ.28 ಶುಕ್ರವಾರದಂದು ಸಂಜೆ 6.30ರಿಂದ ಸಪರಿವಾರ ಉಳ್ಳಾಕುಲು ದೈವದ ಭಂಡಾರ ತೆಗೆಯುವುದು, ರಾತ್ರಿ 7.30ರಿಂದ ಸೇವಾರಂಗಪೂಜೆ, ಮಹಾಪೂಜೆ ರಾತ್ರಿ 10ರಿಂದ ನೇಮೋತ್ಸವ ನಡೆಯಲಿದೆ.

ನ.29 ಶನಿವಾರದಂದು ಬೆಳಗ್ಗೆ 8.30ರಿಂದ ಚಾಮುಂಡಿ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ಪೂರ್ವಾಹ್ನ ಗಂಟೆ 11ರಿಂದ ಗಣಗಳ ನೇಮ, ಮಧ್ಯಾಹ್ನ 12ಕ್ಕೆ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಪ್ರಸಾದ ಭೋಜನ ವಿತರಣೆಯಾಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ನ.26 ಬುಧವಾರದಂದು ಬೆಳಿಗ್ಗೆ ಗಂಟೆ 11ರಿಂದ 12.30ರವರೆಗೆ ಸುಮ ವಿ. ಆಚಾರ್ ಬಳಗದವರಿಂದ ಭಕ್ತಿ ರಸ ಮಂಜರಿ ಹಾಗೂ ಸಂಜೆ ಗಂಟೆ 6ರಿಂದ 8.30ರವರೆಗೆ ನಿನಾದ ಸಾಂಸ್ಕೃತಿಕ ಕೇಂದ್ರ, ತಂಟೆಪ್ಪಾಡಿ ಇವರಿಂದ ನಿನಾದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಸುಮ ಕೋಟೆ, ಅಭಿಜ್ಞಾ ಭಟ್ ನಾಟಿಕೇರಿ, ವಿಭಾಶ್ರೀ ಬೆಳ್ಳಾರೆ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.

ನ.27 ಗುರುವಾರದಂದು ಸಂಜೆ ಗಂಟೆ 6ರಿಂದ 8.30ರವರೆಗೆ ವಿದುಷಿ ಪ್ರಣತಿ ಚೈತನ್ಯ ಪದ್ಯಾಣರವರ ಪದಯಾನ ತಂಡದವರಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಲಿದೆ.

ನ.28 ಗುರುವಾರದಂದು ಸಂಜೆ ಗಂಟೆ 6ರಿಂದ 8ರವರೆಗೆ ಡ್ಯಾನ್ಸ್ & ಬೀಟ್ಸ್ ನೇತೃತ್ವದ ‘ಮುದ್ರಾರಂಗ’ ಮಕ್ಕಳ ರಂಗ ನಾಟಕ ತಂಡದಿಂದ ‘ಗೊಂಬೆ ರಾವಣ’ ನಾಟಕ ಹಾಗೂ ವಿದ್ಧು ಉಚ್ಚಿಲ ನಿರ್ದೇಶನದ ಶರವಣಭವ ಸಿಂಗಾರಿ ಮೇಳ ಇವರಿಂದ ಚೆಂಡೆ ವೈಭವ ಜರುಗಲಿದೆ.