ಸುಳ್ಯ ಜ್ಯೋತಿ ಸರ್ಕಲ್ ನಿಂದ ಜೂನಿಯರ್ ಕಾಲೇಜು ಹೋಗುವ ರಸ್ತೆ ಬದಿ ಗಿಡ ಬಳ್ಳಿಗಳು ರಸ್ತೆಯನ್ನು ಆವರಿಸಿದೆ.

ಇಕ್ಕಟ್ಟಾದ ರಸ್ತೆ ಇದಾಗಿದ್ದು ವಾಹನಗಳು ಸಂಚರಿಸುವಾಗ ರಸ್ತೆ ಬದಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ.ದಿನಂಪ್ರತಿ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿದ್ದು ಪೊದೆ ಬಳ್ಳಿಗಳಿಂದ ನಡದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.















ವಿಷಕಾರಿ ಹಾವುಗಳು ಕೂಡ ಇಲ್ಲಿ ಸಂಚರಿಸುತ್ತಿದ್ದು ಸಂಬಂಧಪಟ್ಟವರು ಕೂಡಲೇ ರಸ್ತೆ ಬದಿ ಇರುವ ಗಿಡ,ಬಳ್ಳಿಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.











