
ಹಿರಿಯ ಸಹಕಾರಿ ಧುರೀಣ, ಸಮಾಜ ಸೇವಕ ದಿ. ಕೋಟೆ ವಸಂತ ಕುಮಾರ್ ರವರ ನೆನಪಿಗಾಗಿ ಅವರ ಪುತ್ರ ಉದ್ಯಮಿ ರಘುರಾಮ ಕೋಟೆಯವರು ಸ್ಥಾಪಿಸಿರುವ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ತಂಟೆಪ್ಪಾಡಿ ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ನ. 20ರಂದು ನಡೆಯಿತು.
















ಶಾಲಾ ಸಹಶಿಕ್ಷಕಿ ಸಂಪ್ರೀತ ಪ್ರಭು ದಿ. ಕೋಟೆ ವಸಂತ ಕುಮಾರ್ ಮತ್ತು ಅವರ ಕುಟುಂಬದ ಪರಿಚಯ ಹಾಗೂ ರೈಟು ಟು ಲಿವ್ ಸಂಸ್ಥಾಪಕ ರಘುರಾಮ ಕೋಟೆಯವರ ಪರಿಚಯ ಹೇಳಿ ಕೃತಜ್ಞತೆ ಸಲ್ಲಿಸಿದರಯ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ವಾಣಿ ಕಳಂಜ, ಸ್ಥಳೀಯರಾದ ಶ್ಯಾಮಪ್ರಸಾದ್ ತಂಟೆಪ್ಪಾಡಿ ಸುದ್ದಿ ಮಾಧ್ಯಮದ ವರದಿಗಾರ ಈಶ್ವರ ವಾರಣಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರಾದ ಪವಿತ್ರಾ, ಜ್ಯೋತಿ, ಅಂಗಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











