ಕಲ್ಲುಗುಂಡಿ : ನೆಲ್ಲಿಕುಮೇರಿ ಬಳಿ ಅಂಗಡಿಗೆ ಹೋರಿ ದಾಳಿ – ಅಂಗಡಿ ಧ್ವಂಸ

0

ಕಲ್ಲುಗುಂಡಿ ನೆಲ್ಲಿಕುಮೇರಿಯ ಫಿಲೋಮಿನ ಕುಟಿನ್ಹರವರ ಅಂಗಡಿಗೆ ಹೋರಿಗಳು ದಾಳಿಮಾಡಿ ಅಂಗಡಿ ದ್ವಂಸ ಮಾಡಿದ ಬಗ್ಗೆ ನಿನ್ನೆ ಸಂಜೆ ವೇಳೆ ವರದಿಯಾಗಿದೆ.
ಅಂದಾಜು ಒಂದು ಲಕ್ಷದಷ್ಟು ನಷ್ಟ ಸಂಭವಿಸಿದ್ದು, ಹೋರಿ ದಾಳಿಯಿಂದ ಫಿಲೋಮಿನರವರಿಗೆ ಗಾಯವಾಗಿದೆ.
ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಪಂಚಾಯತ್ ಸದಸ್ಯರಾದ ಜಿ.ಕೆ. ಹಮೀದ್, ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಪಂಚಾಯತ್ ಸ್ವಚ್ಛತಾ ತಂಡದ ಗುರುವ ಕಡೆಪಾಲ ಭೇಟಿ ನೀಡಿದರು.